ಅಮೆರಿಕದ ಶಾಲೆಗಳಲ್ಲಿ ಮತ್ತೆ ಗುಂಡಿನ ಮೊರೆತ!

masthmagaa.com:

ಅಮೆರಿಕದ ಶಾಲೆಗಳಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ಎರಡು ಪ್ರತ್ಯೇಕ ಶೂಟಿಂಗ್‌ ಪ್ರಕರಣಗಳಲ್ಲಿ ಒಬ್ಬ ವಿದ್ಯಾರ್ಥಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಮೊದಲ ಪ್ರಕರಣ ವರ್ಜಿನಿಯಾ ರಾಜ್ಯದ ಬ್ರಿಡ್ಜ್‌ವಾಟರ್‌ ಎಂಬ ಕಾಲೇಜ್‌ನಲ್ಲಿ ನಡೆದಿದ್ದು, 27 ವರ್ಷದ ಅಲೆಕ್ಸಾಂಡರ್‌ ವ್ಯಾಟ್‌ ಎಂಬಾತ ಕಾಲೇಜ್‌ನ ಇಬ್ಬರು ಸೆಕ್ಯುರಿಟಿ ಆಫೀಸರ್ಸ್‌ಗಳನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಮೃತಪಟ್ಟವರನ್ನ ಜಾನ್‌ ಪೇಂಟರ್‌ ಮತ್ತು ಜೆ ಜೆ ಜೆಫರ್ಸನ್‌ ಅಂತ ಗುರುತಿಸಲಾಗಿದೆ. ಆದ್ರೆ ಈ ಹತ್ಯೆಗೆ ಕಾರಣ ಏನು ಅಂತ ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರೋ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಮೃತಪಟ್ಟಿರೋರಿಗೆ ಸಂತಾಪ ಸೂಚಿಸಿ, ಗನ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ತರೋದಾಗಿ ತಿಳಿಸಿದ್ದಾರೆ. ಮತ್ತೊಂದು ಪ್ರಕರಣ ಮಿನಿಪೋಲಿಸ್‌ನ ರಿಚಿಫೀಲ್ಡ್‌ ಅನ್ನೋ ನಗರದಲ್ಲಿ ನಡೆದಿದ್ದು, ಇದರಲ್ಲಿ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌ ಚಳುವಳಿಯ ಕಾರ್ಯಕರ್ತ ಕೊರ್ಟೆಜ್‌ ರೈಸ್‌ನ ಮಗ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಅರೆಸ್ಟ್‌ ಮಾಡಲಾಗಿದೆ ಅಂತ ರಿಚಿಫೀಲ್ಡ್‌ ಪೋಲಿಸ್‌ ತಿಳಿಸಿದ್ದಾರೆ. ಭಾರತದಲ್ಲಿ ಅಪರಾಧಗಳು ಜಾಸ್ತಿಯಾಗ್ತಿವೆ. ಅಲ್ಲಿಗೆ ಹೋಗ್ಬೇಡಿ ಅನ್ನೋ ಅಮೆರಿಕ ತನ್ನ ದೇಶದಲ್ಲಿ ಏನ್ ನಡೀತಿದೆ ಅನ್ನೋದನ್ನ ಮೊದಲು ನೋಡಿಕೊಳ್ಳಬೇಕು..

-masthmagaa.com

Contact Us for Advertisement

Leave a Reply