ನಮ್ಗೆ ಸ್ಕೂಲ್​ ಬೇಡ.. ಹಿಜಬ್​ ಬೇಕು: ಪಟ್ಟು ಬಿಡದ ವಿದ್ಯಾರ್ಥಿನಿಯರು

masthmagaa.com:

ಹಿಜಬ್​ ವಿವಾದ ಬೆನ್ನಲ್ಲೇ ಬಂದ್​ ಆಗಿದ್ದ ಹೈಸ್ಕೂಲ್​ ಇವತ್ತಿನಿಂದ ಮತ್ತೆ ಆರಂಭವಾಗಿದೆ. ಆದ್ರೆ ತರಗತಿಗಳಲ್ಲಿ ಧಾರ್ಮಿಕ ಗುರುತುಗಳನ್ನ ಪ್ರದರ್ಶಿಸುವ ಬಟ್ಟೆಗಳನ್ನ ಧರಿಸಬಾರ್ದು ಅಂತ ಹೈಕೋರ್ಟ್ ​ಮೊನ್ನೆ ಮಧ್ಯಂತರ ಆದೇಶ ನೀಡಿದ್ರೂ ಕೆಲವೊಂದುಕಡೆ ವಿದ್ಯಾರ್ಥಿನಿಯರು ಹಿಜಬ್​ ಧರಿಸಿಯೇ ಬಂದಿದ್ರು. ಅಂಥವರನ್ನ ತಡೆದ ಶಿಕ್ಷಕರು, ಹಿಜಬ್​ ತೆಗೆದು ಒಳಗೆ ಬರುವಂತೆ ಸೂಚಿಸಿದ್ರು. ಕೆಲವರು ಅದಕ್ಕೆ ಒಪ್ಪಿ ಹಿಜಬ್​ ತೆಗೆದು ಬ್ಯಾಗಿನಲ್ಲಿಟ್ಟುಕೊಂಡು ಶಾಲೆ ಒಳಗೆ ಹೋದ್ರು.. ಇನ್ನೂ ಕೆಲವೊಂದುಕಡೆ ಹಿಜಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿದ್ರು.​ ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಮತ್ತು ಪೋಷಕರು ವಾಗ್ವಾದ ನಡೀತು. ಶಿವಮೊಗ್ಗದಲ್ಲಂತೂ ಹಿಜಬ್​ ಧರಿಸಿ ಬಂದಿದ್ದ 13 ವಿದ್ಯಾರ್ಥಿನಿಯರು ಅದನ್ನ ತೆಗೆಯಲು ಒಪ್ಪಲೇ ಇಲ್ಲ. ಆ ಮಕ್ಕಳಿಗೆ ಇವತ್ತು ಪೂರ್ವಸಿದ್ದತಾ ಪರೀಕ್ಷೆ ಇತ್ತು. ಆದ್ರೆ ಹಿಜಬ್​ ತೆಗೆಯೋಕೆ ಹೇಳಿದ್ರೆ, ನಮ್ಗೆ ಎಕ್ಸಾಮೇ ಬೇಡ ಅಂತೇಳಿ ಅವರು ಮನೆಗೆ ವಾಪಸ್​ ಹೋದ್ರು. ನಮ್ಗೆ ಸ್ಕೂಲ್​ ಬೇಡ, ಧರ್ಮ ಬೇಕು ಅಂತ ಓರ್ವ ವಿದ್ಯಾರ್ಥಿನಿ ಹೇಳಿದ್ರೆ… ಮತ್ತೋರ್ವ ವಿದ್ಯಾರ್ಥಿನಿ, ಹಿಜಬ್​ ತೆಗೆದು ನಾವು ಸ್ಕೂಲ್​ಗೆ ಹೋಗಲ್ಲ ಅಂತ ಹೇಳಿದ್ರು… ಮತ್ತೊರ್ವ ವಿದ್ಯಾರ್ಥಿನಿ, ಹಿಜಬ್ ತೆಗೆದು ಪರೀಕ್ಷೆ ಬರೀಬೇಕು ಅಂತ ನಮ್ಮ ಧರ್ಮದಲ್ಲಿ ಇಲ್ಲ ಅಂದ್ರು. ಇನ್ನು ಈ ಬಗ್ಗೆ ಮಾತನಾಡಿದ ಶಿವಮೊಗ್ಗ ಡಿಡಿಪಿಐ, ಮಕ್ಕಳನ್ನ ನೋಡಿದ್ರೆ ಮುಗ್ದರು ಅನಿಸುತ್ತೆ. ಅವರು ಬಾಹ್ಯ ಇನ್​ಫ್ಲುಯೆನ್ಸ್​ಗೆ ಒಳಪಟ್ಟು ಹೀಗೆ ಮಾಡಿದಂತೆ ಕಾಣ್ತಿದೆ. ಇದು ಪೂರ್ವಸಿದ್ಧತಾ ಪರೀಕ್ಷೆ ಆಗಿರೋದ್ರಿಂದ ಪರೀಕ್ಷೆ ಬರೆಯಲು ಅವರಿಗೆ ಮತ್ತೊಂದು ಅವಕಾಶ ಕೊಡ್ತೀವಿ ಎಂದಿದ್ದಾರೆ.
– ಅತ್ತ ಶಿವಮೊಗ್ಗದ ಶಿಕಾರಿಪುರದಲ್ಲಿ ಸುಮಾರು 40 ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಶಾಲೆಗೆ ಬಂದಿದ್ರು. ಕೋರ್ಟ್ ಆದೇಶ ಹಿನ್ನೆಲೆ ಅವರಿಗೆ ಶಾಲೆ ಒಳಗೆ ಪ್ರವೇಶ ಕೊಡದೇ ಇದ್ದಿದ್ದರಿಂದ ಅವರು ಹಾಗೇ ಮನೆಗೆ ಹೋದ್ರು. ಕೆಲವೊಂದುಕಡೆ ಶಿಕ್ಷಕರು ಹೇಳಿದ್ದನ್ನ ಕೇಳಿದ ಮಕ್ಕಳು ಹಿಜಬ್​ ತೆಗೆದು, ಬ್ಯಾಗಿನಲ್ಲಿಟ್ಟುಕೊಂಡು ಶಾಲೆಗೆ ಎಂಟ್ರಿ ಕೊಟ್ರು.
– ಇನ್ನು ರಾಜ್ಯದ ಕೆಲ ಸರ್ಕಾರಿ ಉರ್ದು ಶಾಲೆಗಳಲ್ಲಿ ಹಿಜಬ್​ ಧರಿಸಿದ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಕಂಡುಬಂದ್ರು. ಹುಬ್ಬಳ್ಳಿಯ ಕೌಲ್​ಪೇಟೆಯ ಉರ್ದು ಶಾಲೆಯಲ್ಲಿ ಹಿಜಬ್​ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ‘ಅಪ್ನಾ ಟೈಂ ಆಯೇಗಾ’ ಅನ್ನೋ ಟೆಕ್ಸ್ಟ್​ ಇದ್ದ ಮಾಸ್ಕ್ ಧರಿಸಿ ಗಮನ ಸೆಳೆದಳು. ಅಪ್ನಾ ಟೈಂ ಆಯೇಗಾ ಅಂದ್ರೆ ‘ನಮ್ಮ ಟೈಂ ಕೂಡ ಬರುತ್ತೆ’ ಅಂತರ್ಥ..

-masthmagaa.com

Contact Us for Advertisement

Leave a Reply