Sukhoi-30 MKI ಯುದ್ಧ ವಿಮಾನಗಳ ಸೇವಾ ಅವಧಿ ವಿಸ್ತರಣೆ!

masthmagaa.com:

ಭಾರತೀಯ ವಾಯು ಪಡೆ ಇದೀಗ ರಷ್ಯಾ ಮೂಲದ ಭಾರತೀಯ ಯುದ್ಧ ವಿಮಾನ Sukhoi-30 Mark 1ನ ಸೇವಾ ಅವಧಿಯನ್ನ ಹೆಚ್ಚಿಸೋಕೆ ಮುಂದಾಗಿದೆ. ಈ ಬಗ್ಗೆ ಮಾತನಾಡಿರೋ ರಕ್ಷಣಾ ಅಧಿಕಾರಿಗಳು, ʼSu-30 MKI ಯುದ್ಧ ವಿಮಾನಗಳ ಸೇವಾ ಅವಧಿಯನ್ನ ಇನ್ನೂ 20ಕ್ಕೂ ಹೆಚ್ಚು ವರ್ಷಗಳ ಕಾಲ ವಿಸ್ತರಿಸೋ ಬಗ್ಗೆ ನಾವು ಯೋಚ್ನೆ ಮಾಡ್ತಿದ್ದೀವಿ. ಯಾಕಂದ್ರೆ ಅವುಗಳ `ಏರ್‌ ಫ್ರೇಮ್‌’ ಅಂದ್ರೆ ಇಂಜಿನ್‌ ಹಾಗೂ ಟೆಕ್ನಿಕಲ್‌ ಉಪಕರಣ ಹೊರತು ಪಡಿಸಿ, ಅವುಗಳ ಬಾಡಿ ಫ್ರೇಮ್‌ ಇನ್ನೂ ಗಟ್ಟಿಮುಟ್ಟಾಗಿದೆ’ ಅಂತ ಹೇಳಿದ್ದಾರೆ. ಅಂದ್ಹಾಗೆ Sukhoi-30 MKI ಫ್ಲೀಟ್‌ನಲ್ಲಿ ಸುಮಾರು 260ಕ್ಕೂ ಹೆಚ್ಚು ವಿಮಾನಗಳಿದ್ದು, ಕಳೆದ ಎರಡು ದಶಕಗಳಿಂದ ಸೇನಾ ಪಡೆಗಳಿಗೆ ಸೇವೆಯನ್ನ ನೀಡ್ತಿವೆ. ಇದೀಗ 2045ರ ವರೆಗೂ ಇವುಗಳು ಬಳಕೆಗೆ ಬರುವಂತೆ ಮಾಡಲು ಭಾರತೀಯ ವಾಯು ಪಡೆ ಗುರಿ ಹೊಂದಿದೆ. ಇನ್ನು ಈ ವಿಮಾನಗಳನ್ನ ಅಪ್‌ಗ್ರೇಡ್‌ ಮಾಡೋ ಪ್ರಾಸೆಸ್‌ನಲ್ಲಿ, ಇವುಗಳಿಗೆ ಲೇಟೆಸ್ಟ್‌ ವೈಮಾನಿಕ ಶಸ್ತ್ರಾಸ್ತ್ರಗಳನ್ನ ಅಳವಡಿಸಲಾಗುತ್ತೆ. ಜೊತೆಗೆ ರೇಡಾರ್‌ಗಳನ್ನ ಡೆವೆಲಪ್‌ ಕೂಡ ಮಾಡಲಾಗುತ್ತೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply