ರದ್ದಾದ ಕಾನೂನಡಿ ಕೇಸ್ ಹಾಕಿದ ರಾಜ್ಯಗಳಿಗೆ ಸುಪ್ರೀಂ ನೋಟಿಸ್!

masthmagaa.com:

ಈ ಹಿಂದೆಯೇ ರದ್ದಾಗಿದ್ದ ಕಾನೂನಿನ ಅಡಿಯಲ್ಲಿ ಕೇಸ್ ದಾಖಲಿಸರೋದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್​​​​​ ನೋಟಿಸ್ ನೀಡಿದೆ. 2015ರಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66ಎಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಆದ್ರೆ ನಂತರವೂ ದೇಶದಲ್ಲಿ ಹಲವು ಇಂಥಹ ಕೇಸ್ ದಾಖಲಾಗಿರೋದರ ಬಗ್ಗೆ ಇತ್ತೀಚೆಗಷ್ಟೇ ಕೋರ್ಟ್​​ ಅಚ್ಚರಿ ವ್ಯಕ್ತಪಡಿಸಿತ್ತು. ಇದೀಗ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಮತ್ತು ಹೈಕೋರ್ಟ್​​ಗಳ ರಿಜಿಸ್ಟ್ರಾರ್ ಜನರಲ್​ಗಳಿಗೆ ನೋಟಿಸ್ ಕೊಟ್ಟಿದೆ. 4 ವಾರಗಳಲ್ಲಿ ಉತ್ತರ ನೀಡುವಂತೆಯೂ ಸೂಚಿಸಿದೆ.

-masthmagaa.com

Contact Us for Advertisement

Leave a Reply