ಸುಪ್ರೀಂಕೋರ್ಟ್​​ನಲ್ಲಿ ಫ್ಲಿಪ್​ಕಾರ್ಟ್​​​, ಅಮೆಜಾನ್​​ಗೆ ಶಾಕ್!

masthmagaa.com:

ಆನ್​ಲೈನ್​​ ದಿಗ್ಗಜ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​​ಗೆ ಸುಪ್ರೀಂಕೋರ್ಟ್​ ಡಿಚ್ಚಿ ಕೊಟ್ಟಿದೆ. ತನ್ನ ವ್ಯವಹಾರದ ಕುರಿತು ತನಿಖೆ ನಡೆಸಬಾರದು ಅಂತ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​​​​​ ತಿರಸ್ಕರಿಸಿದೆ. ಅಷ್ಟೇ ಅಲ್ಲ.. ಅಮೆಜಾನ್​​, ಫ್ಲಿಪ್​ಕಾರ್ಟ್​ ದೊಡ್ಡ ಸಂಸ್ಥೆಗಳು.. ತನಿಖೆ ಮತ್ತು ಪಾರದರ್ಶಕತೆಗೆ ನೀವೇ ಮುಂದಾಗಬೇಕು. ನಿಮಗೆ ಇಷ್ಟವಿಲ್ಲದಿದ್ದರೂ ತನಿಖೆ ನಡೆಯಲೇಬೇಕು ಅಂತ ಸುಪ್ರೀಂಕೋರ್ಟ್​​ ಚೀಫ್ ಜಸ್ಟೀಸ್ ಎನ್​​.ವಿ ರಮಣ ಅಭಿಪ್ರಾಯಪಟ್ಟಿದ್ದಾರೆ. ತನಿಖೆಯಲ್ಲಿ ಭಾಗಿಯಾಗಲು 4 ವಾರ ಟೈಂ ಕೂಡ ನೀಡಲಾಗಿದೆ. ಈ ಸಂಸ್ಥೆಗಳು ಆಯ್ದ ಕೆಲ ಸೆಲ್ಲರ್​​ಗಳನ್ನು ಪ್ರಮೋಟ್ ಮಾಡ್ತಾರೆ. ಕಾಂಪಿಟಿಷನ್ ಹತ್ತಿಕ್ಕಲು ದೊಡ್ಡಮಟ್ಟದ ಡಿಸ್ಕೌಂಟ್ ನೀಡಲಾಗುತ್ತೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದ್ರ ಬೆನ್ನಲ್ಲೇ ದಿ ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ ಕಳೆದ ವರ್ಷ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​​​ ಹೈಕೋರ್ಟ್​ ಮೆಟ್ಟಿಲೇರಿದ್ವು. ಅಲ್ಲಿ ಅರ್ಜಿ ತಿರಸ್ಕಾರವಾದ್ದರಿಂದ ಈ ಸಂಸ್ಥೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ವು.

-masthmagaa.com

Contact Us for Advertisement

Leave a Reply