ಹೈಕೋರ್ಟ್‌ನ ಬೋರ್ಡ್ ಎಕ್ಸಾಂ‌ ಆದೇಶಕ್ಕೆ ಸುಪ್ರೀಂ ಬ್ರೇಕ್!

masthmagaa.com:

ರಾಜ್ಯದಲ್ಲಿ 5, 8, 9, 11ನೇ ತರಗತಿಗಳಿಗೆ ಬೋರ್ಡ್ ಎಕ್ಸಾಂ ನಡೆಸೋಕೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಮಾರ್ಚ್ 22ರಂದು ಕರ್ನಾಟಕ ಹೈ ಕೋರ್ಟ್‌ ಬೋರ್ಡ್‌ ಪರೀಕ್ಷೆಗೆ ಅನುಮತಿ ನೀಡಿ ಆದೇಶ ನೀಡಿತ್ತು. ಅದ್ರಂತೆ ಸ್ಥಗಿತಗೊಂಡ ಪರೀಕ್ಷೆಗಳನ್ನ ಮತ್ತೆ ನಡೆಸಲಾಗಿತ್ತು. ಆದ್ರೆ ಈಗ ಫಲಿತಾಂಶ ಬರೋ ಹೊತ್ತಲ್ಲಿ, ಸದ್ಯ ಯಾವುದೇ ಶಾಲೆಗಳೂ ಫಲಿತಾಂಶ ಪ್ರಕಟಿಸಬಾರದು. ಮುಂದಿನ ಆದೇಶದವರೆಗೆ ಕಾಯಬೇಕು ಅಂತೇಳಿ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.‌ ಅಲ್ಲದೆ ಬೋರ್ಡ್‌ ಎಕ್ಸಾಂಗಳು ಅನಗತ್ಯ ಒತ್ತಡ ತರಬಹುದು. ಹೈಕೋರ್ಟ್‌ನ ಈ ಆಕ್ಷೇಪಾರ್ಹ ಆದೇಶ RTE ಕಾಯಿದೆಗೆ ಸಮ್ಮತವಾಗಿಲ್ಲ ಅಂತ ತೋರ್ತಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಯಾವುದೇ ಶಾಲೆಗಳು ಫಲಿತಾಂಶ ಪ್ರಕಟಿಸಬಾರ್ದು ಅಂತ ಸುಪ್ರೀಂ ಹೇಳಿದೆ. ಈ ಮೂಲಕ ಬೋರ್ಡ್‌ ಎಕ್ಸಾಮ್‌ ನಡೆಸೊ ರಾಜ್ಯ ಸರ್ಕಾರದ ಮಹತ್ವದ ಚಿಂತನೆಗೆ ಮತ್ತೆ ಹಿನ್ನಡೆಯಾಗಿದೆ.

-masthmagaa.com

Contact Us for Advertisement

Leave a Reply