ಆಕ್ಸಿಜನ್ & ಔಷಧ ಪೂರೈಕೆಗೆ ಸುಪ್ರೀಂಕೋರ್ಟ್​​ನಿಂದ ಟಾಸ್ಕ್​ಫೋರ್ಸ್​!

masthmagaa.com:

ದೇಶದಲ್ಲಿ ಕೊರೋನಾ ಜಾಸ್ತಿಯಾಗಿ, ಆಕ್ಸಿಜನ್​​ಗೂ ಪರದಾಟ ಶುರುವಾಗಿರೋದ್ರಿಂದ ಸುಪ್ರೀಂಕೋರ್ಟ್​​ ಒಂದು ಟಾಸ್ಕ್ ಫೋರ್ಸ್ ರಚಿಸಿದೆ. ವೈಜ್ಞಾನಿಕ ಮತ್ತು ಅಗತ್ಯಕ್ಕೆ ತಕ್ಕಂತೆ ರಾಜ್ಯಗಳಿಗೆ ಆಕ್ಸಿಜನ್ ಮತ್ತು ಅಗತ್ಯ ಔಷಧಗಳ ಪೂರೈಕೆಯನ್ನು ಈ ಟಾಸ್ಕ್ ಫೋರ್ಸ್​ ನೋಡಿಕೊಳ್ಳಲಿದೆ. ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಈ ಸಮಿತಿ ಸ್ವತಂತ್ರವಾಗಿದ್ದು, ವೈಜ್ಞಾನಿಕವಾಗಿಯೂ ಕಾರ್ಯತಂತ್ರ ರೂಪಿಸಲಿದೆ. ಈ ತಜ್ಞರ ಸಮಿತಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮತ್ತು ಟಾಸ್ಕ್ ಫೋರ್ಸ್​​ನ ಮುಖ್ಯಸ್ಥರಿಗೂ ಸ್ಥಾನ ನೀಡಲಾಗಿದೆ. ಈ ಸಮಿತಿ ನೇರವಾಗಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್​​ಗೆ ವರದಿ ಸಲ್ಲಿಸಲಿದೆ. ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಈ ಬಗ್ಗೆ ಆದೇಶ ಹೊರಡಿಸಿದ್ದು, ಇನ್ನೊಂದು ವಾರದಲ್ಲಿ ಈ ಸಮಿತಿ ಕೆಲಸ ಶುರು ಮಾಡಲಿದೆ. ನಮ್ಮ ರಾಜ್ಯದ ಕಡೆಯಿಂದ ನಾರಾಯಣ ಹೆಲ್ತ್ ಕೇರ್​​ನ ಡಾ.ದೇವಿ ಪ್ರಸಾದ್ ಶೆಟ್ಟಿ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply