ಸುಶಾಂತ್​​ಗೆ ಡಿಪ್ರೆಷನ್​​​​ ಔಷಧಿ ಕೊಟ್ಟಿದ್ದು ಯಾರು ಗೊತ್ತಾ..? ಶಾಕಿಂಗ್…

masthmagaa.com:

ಮಹಾರಾಷ್ಟ್ರ: ಸುಶಾಂತ್ ಸಿಂಗ್ ರಜಪೂತ್​​​ ನಿಗೂಢ ಸಾವಿನ ಸಂಬಂಧ ಸಿಬಿಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಇದೀಗ ಸಹೋದರಿ ಪ್ರಿಯಾಂಕ ಡಿಪ್ರೆಶನ್​​​ಗೆ ಕೆಲವೊಂದು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸುಶಾಂತ್​​​ಗೆ ಸಲಹೆ ನೀಡಿದ್ದರು ಅನ್ನೋದು ಮೆಸೆಂಜರ್ ಆ್ಯಪ್​​ನಲ್ಲಿ ನಡೆದಿದ್ದ ಚಾಟ್ ಮೂಲಕ ಗೊತ್ತಾಗಿದೆ. ಅಂದ್ರೆ ಜೂನ್ 8ರಂದು ಸುಶಾಂತ್​ ಸಹೋದರಿ ಪ್ರಿಯಾಂಕ ಜೊತೆ ಮೆಸೆಂಜರ್ ಆ್ಯಪ್​ನಲ್ಲಿ ಮಾತನಾಡಿದ್ದರು. ಈ ವೇಳೆ ಪ್ರಿಯಾಂಕ ಕೆಲವೊಂದು ಮಾತ್ರೆ ಮತ್ತು ಔಷಧಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಅಲ್ಲದೆ ಈ ಔಷಧಗಳು ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಸಿಗೋದಿಲ್ಲ ಎಂದು ತಿಳಿಸಿದ್ದ ಪ್ರಿಯಾಂಕ, ತಾವೇ ಫ್ಯಾಮಿಲಿ ಫ್ರೆಂಡ್ ಮೂಲಕ ಪ್ರಿಸ್ಕ್ರಿಪ್ಶನ್ ಕೊಡಿಸಿದ್ದರು ಅನ್ನೋದು ಗೊತ್ತಾಗಿದೆ. ಆದ್ರೆ ವೈದ್ಯರಿಗೆ ತೋರಿಸದೇ, ಸುಶಾಂತ್ ಸ್ಥಿತಿಯನ್ನು ಅರಿಯದೇ ಪ್ರಿಯಾಂಕ ಹೇಗೆ ಈ ರೀತಿಯ ಸಲಹೆಗಳನ್ನು ನೀಡಿದ್ದರು ಅನ್ನೋದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

-masthmagaa.com

Contact Us for Advertisement

Leave a Reply