ತೈವಾನ್ ಮೆಡಲಿಸ್ಟ್ ಗಳಿಗೆ ಫೈಟರ್ ಯುದ್ಧ ವಿಮಾನಗಳ ಸ್ವಾಗತ!

masthmagaa.com:

ಒಲಿಂಪಿಕ್ಸ್‌ನಲ್ಲಿ ಇದುವರೆಗಿನ ಸರ್ವಶ್ರೇಷ್ಟ ಸಾಧನೆ ಮಾಡಿರೋ ತೈವಾನ್ ಆಟಗಾರಿಗೆ ದೇಶಕ್ಕೆ ವಾಪಾಸಾದಾಗ ಸರ್ವಶ್ರೇಷ್ಠ ಸ್ವಾಗತವೇ ಸಿಕ್ಕಿದೆ. ಕ್ರೀಡಾಪಟುಗಳನ್ನ ಹೊತ್ತ ವಿಮಾನ ತೈವಾನ್ ಗೆ ಬರುವಾಗ, ಅದರ ಸುತ್ತಲೂ ತೈವಾನ್ ವಾಯುಪಡೆಯ ಮಿರಾಜ್ ಫೈಟರ್ ಯುದ್ಧ ವಿಮಾನಗಳು ಕಾವಲು ಹಾರಿವೆ. ಎಸ್ಕಾರ್ಟ್ ಮಾಡಿವೆ.
ಈ ಸಲದ ಟೋಕ್ಯೋ ಒಲಿಂಪಿಕ್ಸ್ ನಲ್ಲಿ ಪುಟಾಣಿ ದ್ವೀಪ ತೈವಾನ್ 2 ಚಿನ್ನ, 4 ಬೆಳ್ಳಿ ಸೇರಿದಂತೆ ಒಟ್ಟು 11 ಪದಕಗಳನ್ನ ಗೆದ್ದು ತನ್ನ ಪಾಲಿನ ಅತಿದೊಡ್ಡ ಸಾಧನೆ ಮಾಡಿದೆ. ಆದ್ರೆ ಬೇಜಾರ್ ಏನು ಅಂದ್ರೆ ತೈವಾನ್ ಅನ್ನ ಸೆಪರೇಟ್ ದೇಶ ಅಂತ ಗುರುತಿಸಿಕೊಳ್ಳೋಕೆ ಚೀನಾ ಬಿಡಲ್ಲ. ಅದು ತನ್ನ ಭಾಗ ಅನ್ನುತ್ತೆ. ಇದೇ ಕಾರಣಕ್ಕೆ ಚೈನೀಸ್ ತೈಪೆ ಹೆಸರಲ್ಲಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿತ್ತು ತೈವಾನ್. ಆದ್ರೆ ಅಲ್ಲಿನ ಜನ ಹಾಗೂ ರಾಜಕಾರಣಿಗಳಿಗೆ ಈ ಬಗ್ಗೆ ಚೀನಾ ಮೇಲೆ ಸಿಟ್ಟಿದೆ. ಒಲಿಂಪಿಕ್ಸ್ ನಲ್ಲಿ ಈ ಸಲ ಉತ್ತಮ ಪ್ರದರ್ಶನದ ಬಳಿಕ, ‘PROUD OF TAIWAN’ ಅಂತಾ, ಹಾಗೆ ‘TAIWAN IS TAIWAN’ ಅಂತ ಘೋಷಣೆಗಳನ್ನ ಕೂಗ್ತಿದಾರೆ. ಈ ಹ್ಯಾಷ್ ಟ್ಯಾಗ್ ಗಳೂ ತೈವಾನ್ ನಲ್ಲಿ ಈಗ ಟ್ರೆಂಡಿಂಗ್ ನಲ್ಲಿವೆ.

-masthmagaa.com

Contact Us for Advertisement

Leave a Reply