ಅಫ್ಘನ್​ನಲ್ಲಿ ಅಫೀಮು ಉತ್ಪಾದನೆ, ಮಾರಾಟ ಮೇಲೆ ತಾಲಿ‘ಬ್ಯಾನ್​’ ​!

masthmagaa.com:

ಅಫ್ಘಾನಿಸ್ತಾನದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಅಫೀಮು ಪದಾರ್ಥಗಳನ್ನ ಬೆಳೆರಯಬಾರದು ಅಂತ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡ್‌ಜಾದಾ ಆದೇಶ ಹೊರಡಿಸಿದ್ದಾರೆ. ಅಫ್ಘಾನಿಸ್ತಾನ, ಖಟ್ಟರ್‌ ಮುಸ್ಲೀಂವಾದಿಗಳಾದ ತಾಲಿಬಾನಿಗಳ ತೆಕ್ಕೆಗೆ ಬಂದಮೇಲೆ ಅನೇಕ ಬದಲಾವಣೆಗಳು ನಡೀತ ಇದೆ. ಈಗ ಜಗತ್ತಿನಲ್ಲಿಯೆ ಅತ್ಯಂತ ಹೆಚ್ಚು ಅಫೀಮು ಪದಾರ್ಥಗಳನ್ನ ಬೆಳೆಯುತ್ತಿದ್ದ ಮತ್ತು ಅಫ್ಘನಿಸ್ತಾನದ ಆದಾಯದ ಮೂಲವಾಗಿದ್ದ ಅಫೀಮು ಪದಾರ್ಥಗಳಿಗೆ ತಾಲಿಬಾನಿಗಳು ಕೊಡಲಿ ಏಟು ಕೊಟ್ಟಿದ್ದಾರೆ. ಯಾರಾದ್ರು ಈ ಆದೇಶವನ್ನ ಕಡೆಗಣಿಸಿ ಅಫೀಮು ಬೆಳೆದ್ರೆ ತಕ್ಷಣವೆ ಆ ಬೆಳೆಯನ್ನ ನಾಶಪಡಿಸಲಾಗುವುದು ಮತ್ತು ಶರಿಯಾ ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆ ಕೊಡಲಾಗುವುದು ಅಂತಲೂ ಹೇಳಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡ ನಂತ್ರ ಜಾಗತಿಕ ಮನ್ನಣೆ ಪಡೆಯಲು ತುಂಬಾ ಪ್ರಯತ್ನಿಸ್ತಾ ಇದ್ದಾರೆ. ಹಾಗಾಗಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಅಂತನೂ ಹೇಳಲಾಗ್ತ ಇದೆ.

-masthmagaa.com

Contact Us for Advertisement

Leave a Reply