ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿ ನಿಷೇಧಿಸಿದ ತಾಲಿಬಾನ್!

masthmagaa.com:

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದೇಶದಲ್ಲಿ ವಿದೇಶಿ ಕರೆನ್ಸಿ ಬಳಕೆ ಮೇಲೆ ನಿಷೇಧ ವಿಧಿಸಿದೆ. ಇದ್ರಿಂದ ಈಗಾಗಲೇ ಸೊರಗಿ ಬೆಂಡಾಗಿರೋ ಆರ್ಥಿಕತೆಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ದೇಶದ ಕರೆನ್ಸಿ ಅಫ್ಘನಿಯ ಮೌಲ್ಯ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ಮತ್ತೊಂದ್ಕಡೆ ಅಫ್ಘಾನಿಸ್ತಾನದ ಫಾರಿನ್ ರಿಸರ್ವ್​​​​​ ಮೇಲೆ ನಿರ್ಬಂಧ ವಿಧಿಸಲಾಗಿದೆ. ದೇಶದ ಬ್ಯಾಂಕ್​​ಗಳಲ್ಲಿ ನಗದು ಇಲ್ಲದೇ ಪರದಾಡಬೇಕಾದ ಸ್ಥಿತಿ ಇದೆ. ಮತ್ತೊಂದ್ಕಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಯಾವುದೇ ದೇಶಗಳು ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಿಲ್ಲ. ಈ ನಡುವೆ ದೇಶದ ಹಲವು ಭಾಗಗಳಲ್ಲಿ ಅಮೆರಿಕನ್ ಡಾಲರ್​ನ್ನೇ ವ್ಯವಹಾರಕ್ಕೆ ಬಳಸಲಾಗ್ತಿದೆ. ಪಾಕಿಸ್ತಾನದ ಜೊತೆಗಿನ ಗಡಿಭಾಗದಲ್ಲಿ ಪಾಕಿಸ್ತಾನಿ ರುಪೀಸ್​​ನ್ನು ಬಳಸಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್ ವಕ್ತಾರ ಝಜೀಬುಲ್ಲಾ ಮುಜಾಹಿದ್​​, ಇನ್ಮುಂದೆ ದೇಶದ ಒಳಗೆ ವಿದೇಶಿ ಕರೆನ್ಸಿಯನ್ನು ಬಳಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ದೇಶದ ಆರ್ಥಿಕ ಪರಿಸ್ಥಿತಿ ಮತ್ತು ದೇಶದ ಹಿತಾಸಕ್ತಿ ದೃಷ್ಟಿಯಿಂದ ಎಲ್ಲರೂ ದೇಶದ ಒಳಗಿನ ವ್ಯವಹಾರಗಳಲ್ಲಿ ಅಫ್ಘನಿ ಕರೆನ್ಸಿಯನ್ನೇ ಬಳಸಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply