ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ವಿರುದ್ಧ ತಾಲಿಬಾನ್ ಪೆಪರ್ ಸ್ಪ್ರೇ!

masthmagaa.com:

ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ ತಮ್ಮ ಶಿಕ್ಷಣ ಮತ್ತು ಉದ್ಯೋಗದ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ತಾಲಿಬಾನಿಗಳು ಪೆಪ್ಪರ್ ಸ್ಪ್ರೇ ಮಾಡಿದ್ದಾರೆ. ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದ್ರ ವಿರುದ್ಧ ಪ್ರತಿಭಟನೆ ಕೂಡ ನಡೀತಾ ಇದೆ. ಇದೀಗ ಕಾಬೂಲ್​​​​ ಯುನಿವರ್ಸಿಟಿ ಬಳಿ ಪ್ರತಿಭಟನೆ ನಡೀತಿದ್ದು, ಅದನ್ನ ಹತ್ತಿಕ್ಕಲು ಪೆಪ್ಪರ್ ಸ್ಪ್ರೇ ಬಳಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮಹಿಳಾ ಪ್ರತಿಭಟನಾಕಾರರು, ತಾಲಿಬಾನಿಗಳು ಪೆಪ್ಪರ್ ಸ್ಪ್ರೇ ಹಾರಿಸಿದಾಗ ನಾವು ಕೂಗಿದ್ವಿ. ನಿಮಗೆ ನಾಚಿಕೆಯಾಗ್ಬೇಕು ಅಂತ ಹೇಳಿದ್ವಿ. ಆಗ ಓರ್ವ ತಾಲಿಬಾನಿ ಬಂದೂಕು ತೋರಿಸಿ ಬೆದರಿಸಿದ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply