ತಾಲಿಬಾನ್ ಇಕ್ಕಳದಲ್ಲಿ ಅಮೆರಿಕ!

masthmagaa.com:

ಆಗಸ್ಟ್​ 31ರ ಒಳಗೆ ಅಫ್ಘಾನಿಸ್ತಾನದಿಂದ ಹೊರಹೋಗೋದಾಗಿ ಘೋಷಿಸಿರೋ ಅಮೆರಿಕ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಯಾಕಂದ್ರೆ ಸ್ಥಳಾಂತರ ಪ್ರಕ್ರಿಯೆ ಅಮೆರಿಕ ಅಂದುಕೊಂಡಷ್ಟು ಸುಲಭವಾಗಿ ಇಲ್ಲ.. ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳು ಮತ್ತಷ್ಟು ಟೈಂ ಬೇಕು ಅಂತಿವೆ. ಆದ್ರೆ ತಾಲಿಬಾನಿಗಳು ಮಾತ್ರ ಆಗಸ್ಟ್ 31ರ ಡೆಡ್​ಲೈನ್​ ಒಳಗೆ ಖಾಲಿ ಮಾಡ್ಕೊಂಡು ಹೋಗದಿದ್ರೆ ಪರಿಣಾಮ ಎದುರಿಸಬೇಕು.. ಡೆಡ್​​ಲೈನ್ ವಿಸ್ತರಣೆಗೆ ಅನುಮತಿ ಕೇಳಿಯೂ ಇಲ್ಲ. ಅನುಮತಿ ಕೊಡೋದೂ ಇಲ್ಲ ಅಂತಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೊ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲ್ಲಿವನ್​​, ಡೆಡ್​ಲೈನ್ ವಿಸ್ತರಣೆ ಬಗ್ಗೆ ತಾಲಿಬಾನಿಗಳ ಜೊತೆ ಮಾತುಕತೆ ನಡೀತಾ ಇದೆ ಅಂತ ಹೇಳಿದಾರೆ. ಅಫ್ಘಾನಿಸ್ತಾನ ಟೇಕೋವರ್ ಬಳಿಕವೂ ಕಾಬೂಲ್ ಏರ್​ಪೋರ್ಟ್​ ಬಳಿ 6 ಸಾವಿರ ಅಮೆರಿಕ ಸೈನಿಕರಿದ್ದು, ಸ್ಥಳಾಂತರ ಪ್ರಕ್ರಿಯೆ ನಡೆಸ್ತಿದ್ದಾರೆ. ಸದ್ಯ ತಾಲಿಬಾನಿಗಳು ಯಾವುದೇ ತೊಂದ್ರೆ ಕೊಟ್ಟಿಲ್ಲ. ಆದ್ರೆ ಡೆಡ್​ಲೈನ್ ಬಳಿಕ ಏನ್ ಮಾಡ್ತಾರೆ ಅನ್ನೋ ಚಿಂತೆ ಶುರುವಾಗಿದೆ. ಈ ಸಂಬಂಧ ಇಂದು ನಡೆಯಲಿರುವ ಜಿ7 ರಾಷ್ಟ್ರಗಳ ಮೀಟಿಂಗ್​ನಲ್ಲಿ ಜೋ ಬೈಡೆನ್ ಚರ್ಚಿಸಲಿದ್ದಾರೆ. ಜೋ ಬೈಡೆನ್ ಡೆಡ್​ಲೈನ್ ವಿಸ್ತರಿಸೋ ಚಿಂತನೆಯಲ್ಲಿದ್ದಾರೆ. ಆದ್ರೆ ಅದಕ್ಕೆ ಅವರ ಸಲಹೆಗಾರರೇ ವಿರೋಧ ವ್ಯಕ್ತಪಡಿಸಿದ್ಧಾರೆ. ಆಗಸ್ಟ್ 31ರ ಒಳಗೇ ಮುಗಿಸೋಣ.. ಅವಧಿ ವಿಸ್ತರಣೆ ಭದ್ರತೆ ಕಾರಣದಿಂದ ಡೇಂಜರಸ್ ಆಗ್ಬೋದು ಅಂತ ಎಚ್ಚರಿಸಿದ್ದಾರೆ. ಈ ಸಂಬಂಧ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​​ಗೆ ಕಾಲ್ ಮಾಡಿ ಮಾತಾಡಿದಾರೆ. ಈ ವೇಳೆ ಉಭಯ ನಾಯಕರು ಜೊತೆಯಾಗಿ ಕೆಲಸ ಮಾಡಲು ನಿರ್ಧರಿಸಿದ್ದು, ತಮ್ಮ ಪ್ರಜೆಗಳು ಮತ್ತು ಅಫ್ಘಾನಿಸ್ತಾನದಲ್ಲಿ ಕಳೆದ 20 ವರ್ಷಗಳಿಂದ ಸಹಕರಿಸಿದವರ ಸ್ಥಳಾಂತರ ಪ್ರಕ್ರಿಯೆಯನ್ನು ಚುರುಕುಗೊಳಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕದ ಇಂಟೆಲಿಜೆನ್ಸ್ ಕಮಿಟಿ ಸದಸ್ಯ ಆಡಂ ಸ್ಚಿಫ್​​​​, ಡೆಡ್​ಲೈನ್ ಒಳಗೆ ಸ್ಥಳಾಂತರ ಪ್ರಕ್ರಿಯೆ ನಡೀಬೋದು.. ಆದ್ರೆ ಸ್ವಲ್ಪ ಕಷ್ಟ ಇದೆ. ಯಾಕಂದ್ರೆ ಅಫ್ಘಾನಿಸ್ತಾನದಲ್ಲಿ ಕಾಬೂಲ್​​ಗೆ ಸ್ಥಳಾಂತರವಾಗಲು ರೆಡಿಯಾಗಿರೋ ಜನರ ಖಚಿತ ಸಂಖ್ಯೆಯೇ ಗೊತ್ತಿಲ್ಲ ಅಂತ ಹೇಳಿದ್ದಾರೆ. ಅದೇ ರೀತಿ ಸ್ಟೇಟ್​ ಡಿಪಾರ್ಟ್​ಮೆಂಟ್ ಪ್ರತಿಕ್ರಿಯಿಸಿ, ಆಗಸ್ಟ್​ 31ಕ್ಕೆ ಡೆಡ್​​ಲೈನ್ ಎಂಡ್ ಅಂದಮಾತ್ರಕ್ಕೆ ಅಫ್ಘನ್ನರ ರಕ್ಷಣೆ ಸಂಬಂಧ ನಮಗಿರೋ ಕಮಿಟ್​ಮೆಂಟ್ ಅಂತ್ಯವಾಗಲ್ಲ.. ಅವರ ರಕ್ಷಣೆಗೆ, ಸಹಾಯಕ್ಕೆ ನಂತರವೂ ನಾವು ಬದ್ಧರಾಗಿದ್ದೀವಿ ಅಂತ ಹೇಳಿದೆ. ಇನ್ನು ಫ್ರಾನ್ಸ್​ ಕೂಡ ಆಗಸ್ಟ್ 31ರ ಒಳಗೆ ಎಲ್ಲರನ್ನು ಸ್ಥಳಾಂತರ ಮಾಡಕ್ಕೆ ಆಗಲ್ಲ.. ನಮಗೆ ಇನ್ನೂ ಸ್ವಲ್ಪ ಟೈಂ ಬೇಕು ಅಂತ ಕೇಳಿದೆ. ಜರ್ಮನಿ ಡೆಡ್​ಲೈನ್ ವಿಸ್ತರಣೆ ಸಂಬಂಧ ನ್ಯಾಟೋ ಮತ್ತು ತಾಲಿಬಾನಿಗಳ ಜೊತೆ ಮಾತುಕತೆ ನಡೆಸ್ತಿರೋದಾಗಿ ಹೇಳಿದೆ. ಈ ನಡುವೆ ಅಫ್ಘಾನಿಸ್ತಾನದಿಂದ ಸ್ಥಳಾಂತರ ಪ್ರಕ್ರಿಯೆಯನ್ನು ಅಮೆರಿಕ ಚುರುಕುಗೊಳಿಸಿದೆ. ನಿನ್ನೆ ಒಂದೇ ದಿನ 10,900 ಮಂದಿಯನ್ನು ಸ್ಥಳಾಂತರ ಮಾಡಿದೆ. ಆಗಸ್ಟ್​ 14ರಿಂದ ಈವರೆಗೆ ಒಟ್ಟು 48 ಸಾವಿರ ಜನರ ಸ್ಥಳಾಂತರ ಮಾಡಿದೆ.

-masthmagaa.com

Contact Us for Advertisement

Leave a Reply