ಅಫ್ಘಾನ್‌-ಪಾಕ್‌ ಗುದ್ದಾಟ! ಪಾಕಿಸ್ತಾನದ 3 ಸೈನಿಕರಿಗೆ ಗಾಯ!

masthmagaa.com:

ಪಾಕಿಸ್ತಾನ್‌ ಮತ್ತು ಅಫ್ಘಾನಿಸ್ತಾನ್‌ ನಡುವೆ ಅಘೋಷಿತ ಯುದ್ದ ಸ್ಥಿತಿ ನಿರ್ಮಾಣವಾಗಿದೆ. ದಾಳಿ ಪ್ರತಿದಾಳಿ ನಡೆಸಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಮಾರ್ಚ್‌ 18 ರಂದು ಅಫ್ಘಾನಿಸ್ತಾನದ ಖೋಸ್ಟ್‌ ಮತ್ತು ಪಕ್ತಿಯಾ ಪ್ರಾಂತ್ಯದಲ್ಲಿ ಪಾಕ್‌ ಸೇನೆ ದಾಳಿ ನಡೆಸಿರೋ ಪರಿಣಾಮ ಕನಿಷ್ಠ 8 ಮಂದಿ ಸಾವನ್ನಪ್ಪಿದ್ರು. ಇದ್ರ ಪ್ರತೀಕಾರ ತೀರಿಸ್ಕೊಂಡಿರೋ ತಾಲಿಬಾನ್‌, ಪಾಕಿಸ್ತಾನ್‌ ಮೇಲೆ ದಾಳಿ ನಡೆಸಿದೆ. ಪಾಕ್‌-ಅಫ್ಘಾನ್‌ ಗಡಿಯ ವಿವಾದಿತ ಡ್ಯುರಾಂಡ್‌ ಲೈನ್‌ನಲ್ಲಿ ತಾಲಿಬಾನ್‌ಗಳು ದಾಳಿ ಮಾಡಿದ್ದಾರೆ. ಪರಿಣಾಮ 3 ಮಂದಿ ಪಾಕ್‌ ಸೈನಿಕರು ಗಾಯಗೊಂಡಿದ್ದಾರೆ. ಹೀಗಂತ ಅಫ್ಘಾನ್‌ ಮೀಡಿಯಾಗಳು ರಿಪೋರ್ಟ್‌ ಮಾಡಿವೆ. ಅಲ್ದೆ ಪಾಕಿಸ್ತಾನ ನಮ್ಮ ಮೇಲೆ ಏರ್‌ಸ್ಟ್ರೈಕ್‌ ಮಾಡಿದ್ರೆ ನಾವು ಪ್ರತಿಕ್ರಿಯೆ ಕೊಡ್ಬೇಕಾಗುತ್ತೆ. ನಿಮ್ಮ ದೇಶವನ್ನ ನೀವು ಸರಿಯಾಗಿ ನಿಭಾಯಿಸ್ತಿಲ್ಲ ಅಂದ್ರೆ ಅದು ನಿಮ್ಮ ಅಸಮರ್ಥತೆಯನ್ನ ತೋರಿಸುತ್ತೆ. ಅದಕ್ಕೆಲ್ಲಾ ನಮ್ಮನ್ನ ದೂರಬೇಡಿ..ಪಾಕಿಸ್ತಾನ ಸರ್ಕಾರಕ್ಕೆ ತಮ್ಮ ಭೂ ಭಾಗದ ಮೇಲೆ ಕಂಟ್ರೋಲ್‌ ತಪ್ಪಿದ್ರೆ, ನಿಮ್ಮತ್ರ ಪ್ರಾಬ್ಲಂ ಇದ್ರೆ ಅದಕ್ಕೆ ನಾವು ಕಾರಣ ಅಲ್ಲ ಅಂತ ಪಾಕ್‌ ಸೇನೆಗೆ ತಾಲಿಬಾನ್‌ ಎಚ್ಚರಿಕೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply