ತಾಲಿಬಾನಿಗಳ ಈ ವಿಚಿತ್ರ ವರ್ತನೆ ನೋಡಿದ್ರೆ ಆಶ್ಚರ್ಯ ಆಗುತ್ತೆ!

masthmagaa.com:

ಈ ತಾಲಿಬಾನಿಗಳ ಕೆಲವೊಂದು ಕೃತ್ಯಗಳನ್ನು ನೋಡಿದ್ರೆ ಇವರಿಗೇನಾದ್ರೂ ತಲೆಯಲ್ಲಿ ಲೂಸ್ ಕನೆಕ್ಷನ್ ಆಗಿದ್ಯಾ ಅಂತ ಅನಿಸುತ್ತೆ. ಯಾಕಂದ್ರೆ 2001ರಲ್ಲಿ ತಾವೇ ನಾಶ ಮಾಡಿದ್ದ ಬಮಿಯನ್ ಬುದ್ಧನ ಪ್ರತಿಮೆಯ ಅವಶೇಷಗಳ ರಕ್ಷಣೆಗೆ ಮುಂದಾಗಿದ್ದಾರೆ. 1500 ವರ್ಷಗಳಷ್ಟು ಹಳೆಯ ಈ ಪ್ರತಿಮೆಯನ್ನು ನೂರಾರು ತಾಲಿಬಾನಿಗಳು ಸೇರಿಕೊಂಡು, ಮೂರು ವಾರಗಳ ಕಾಲ ನಿರಂತರ ಶ್ರಮವಹಿಸಿ ಧ್ವಂಸಗೊಳಿಸಿದ್ರು. ಡೈನಾಮೇಟ್ ಇಟ್ಟು ಉಡಾಯಿಸಿದ್ರು. ಆದ್ರೆ ಈಗ ಅಲ್ಲಿ ಬುದ್ಧನ ಪ್ರತಿಮೆ ಬದಲು ಬರೀ ಅವಶೇಷಗಳಿವೆ.. ಈಗ ಪ್ರಧಾನಿಯಾಗಿರೋ ಮೊಹ್ಮದ್ ಹಸನ್ ಅಖುಂಡ್​​ ದೇಶದ ಎಲ್ಲಾ ಐತಿಹಾಸಿಕ ಸ್ಥಳಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ ಈ ಹಿಂದೆ ತಾಲಿಬಾನಿಗಳು ಅಧಿಕಾರದಲ್ಲಿದ್ದಾಗ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಉಮರ್ ಆದೇಶದ ಮೇರೆಗೆ ಈ ಪ್ರತಿಮೆಯನ್ನು ಧ್ವಂಸ ಮಾಡಿದ್ದು ಬೇರೆ ಯಾರೂ ಅಲ್ಲ.. ಇದೇ ಮೊಹ್ಮದ್ ಹಸನ್ ಅಖುಂಡ್​ ಮುಂದಾಳಾಗಿ ಹೋಗಿ ಪ್ರತಿಮೆ ಧ್ವಂಸಗೊಳಿಸಿದ್ರು. ಈಗ ಅವರೇ ಅವುಗಳ ರಕ್ಷಣೆಗೆ ಆದೇಶಿಸಿದ್ದಾರೆ. ಪ್ರವಾಸಿಗರು ಕೂಡ ಸ್ಥಳಕ್ಕೆ ಭೇಟಿ ನೀಡಬಹುದು ಅಂತ ತಾಲಿಬಾನ್ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಮಿಯನ್ ಪ್ರಾಂತ್ಯದ ಹೊಸ ಸಾಂಸ್ಕೃತಿಕ ವ್ಯವಹಾರಗಳ ಕಚೇರಿ ಅಧಿಕಾರಿ ಮೊಹಮ್ಮದಿ, ಬುದ್ಧನ ಪ್ರತಿಮೆ ಧ್ವಂಸದ ವೇಳೆ ನಾನಿನ್ನೂ ಯುವಕನಾಗಿದ್ದೆ. ಅದ್ರ ಬಗ್ಗೆ ಕಮೆಂಟ್ ಮಾಡೋಕೆ ಆಗಲ್ಲ. ಇಸ್ಲಾಮಿಕ್ ಎಮಿರೇಟ್ ಕಾರಣ ಇದ್ದಿದ್ರಿಂದಲೇ ಆ ನಿರ್ಧಾರ ತೆಗೆದುಕೊಂಡಿರಬಹುದು ಅಂತ ಹೇಳಿದ್ದಾರೆ. ಆದ್ರೆ ಈಗ ದೇಶದ ಐತಿಹಾಸಿಕ ಪರಂಪರೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೀವಿ ಅಂತ ಕೂಡ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply