ತಾಲಿಬಾನಿಗಳ ವಿರುದ್ಧ ದೀರ್ಘಸಂಘರ್ಷಕ್ಕೆ ರೆಡಿಯಾದ ಪಡೆ!

masthmagaa.com:

ಅಫ್ಘಾನಿಸ್ತಾನದ ಹಿಂದಿನ ಸರ್ಕಾರದ ಸೈನಿಕರು ಈಗ ತಾಲಿಬಾನಿಗಳ ವಿರುದ್ಧ ದೀರ್ಘಾವಧಿಯ ಸಂಘರ್ಷಕ್ಕೆ ರೆಡಿಯಾಗ್ತಿದ್ಧಾರೆ. ಜೊತೆಗೆ ತಾಲಿಬಾನಿಗಳೊಂದಿಗೆ ಮಾತುಕತೆಗೆ, ಚೌಕಾಸಿಗೆ ಅವಕಾಶ ಸಿಗುತ್ತಾ ಅಂತ ಕೂಡ ಎದುರು ನೋಡ್ತಿದ್ದಾರೆ ಅಂತ ಅವರ ವಕ್ತಾರ ಅಲಿ ಮೈಸಮ್ ನಜರಿ ತಿಳಿಸಿದ್ಧಾರೆ. ತಾಲಿಬಾನಿಗಳು ಕಾಬೂಲನ್ನು ಕಂಟ್ರೋಲ್​​ಗೆ ತೆಗೆದುಕೊಂಡ ಬಳಿಕ ಇಡೀ ಅಫ್ಘಾನಿಸ್ತಾನದಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪಂಜ್​ಶಿರ್​ಗೆ ಹೋಗ್ತಿದ್ದಾರೆ. ಯಾಕಂದ್ರೆ ಈವರೆಗೆ ತಾಲಿಬಾನಿಗಳ ಕೈಗೆ ಸಿಗದೇ ಉಳಿದಿರೋ ಒಂದೇ ಒಂದು ಪ್ರಾಂತ್ಯ ಅಂದ್ರೆ ಅದು ಪಂಜ್​ಶಿರ್​. ಇಲ್ಲಿ ಅಫ್ಗಾನಿಸ್ತಾನ್ ರೆಸಿಸ್ಟೆನ್ಸ್ ಫೋರ್ಸ್ ಅಂತ ಕರೆಸಿಕೊಳ್ಳುವ ತಾಲಿಬಾನಿಗಳ ಎದುರಾಳಿಗಳ ಕಂಟ್ರೋಲ್ ಇದೆ. ಇದ್ರಲ್ಲಿ ಪಂಜ್​ಶಿರ್ ಗ್ಯಾಂಗ್ ಕೂಡ ಬರುತ್ತೆ. ಇದೀಗ ತಾಲಿಬಾನಿಗಳಿಂದ ಅಪಾಯ ಎದುರಿಸುತ್ತಿರೋ ಸಾವಿರಾರು ಜನ ಇಲ್ಲಿಗೆ ಹೋಗ್ತಿದ್ದಾರೆ. ಈ ಗ್ರೂಪ್ ಸೇರಿ ತಾಲಿಬಾನಿಗಳ ವಿರುದ್ಧ ಹೋರಾಡೋದು ಒಂದು ಉದ್ದೇಶವಾದ್ರೆ, ತಾಲಿಬಾನಿಗಳಿಂದ ಜೀವ ಉಳಿಸಿಕೊಳ್ಳೋದು ಮತ್ತೊಂದು ಉದ್ದೇಶವಾಗಿದೆ. ಈ ಹಿಂದೆ ಈ ಭಾಗದಲ್ಲಿ ಈ ರೆಸಿಸ್ಟೆನ್ಸ್ ಫೋರ್ಸ್​​ನ ಕಮಾಂಡರ್ ಆಗಿದ್ದ ಅಹ್ಮದ್ ಶಾ ಮಸ್ಸೌದ್​​ರನ್ನು 2001ರ ಸೆಪ್ಟೆಂಬರ್​ 11ರ ದಾಳಿಗೂ 2 ದಿನ ಮುನ್ನ ತಾಲಿಬಾನಿಗಳು ಹತ್ಯೆಗೈದಿದ್ರು. ಇದೀಗ ಅವರ ಮಗ ಅಹ್ಮದ್ ಮಸ್ಸೌದ್ ಈ ರೆಸಿಸ್ಟೆನ್ಸ್ ಫೋರ್ಸ್​ ನೇತೃತ್ವ ವಹಿಸಿದ್ಧಾರೆ. ಈಗಾಗಲೇ ಸುಮಾರು 9 ಸಾವಿರ ಮಂದಿಯನ್ನು ಒಟ್ಟುಗೂಡಿಸಿ, ತಾಲಿಬಾನಿಗಳ ವಿರುದ್ಧ ಸಮರ ಸಾರಿದ್ದಾರೆ. ತಾಲಿಬಾನಿಗಳ ಜೊತೆ ಮಾತುಕತೆಗೆ ಸಿದ್ಧ.. ಸಾಮಾಜಿಕ ನ್ಯಾಯ, ಸಮಾನತೆ, ಹಕ್ಕುಗಳು ಮತ್ತು ಎಲ್ಲರಿಗೂ ಸ್ವಾತಂತ್ರ್ಯ.. ಈ ಷರತ್ತುಗಳಿಗೆ ತಾಲಿಬಾನಿಗಳು ಬದ್ಧವಾದ್ರೆ ಸುಮ್ಮನಾಗ್ತೀವಿ. ಒಂದ್ವೇಳೆ ಒಪ್ಪದೇ ಇದ್ರೆ ದೀರ್ಘಕಾಲದ ಸಂಘರ್ಷಕ್ಕೆ ರೆಡಿ ಇದೀವಿ.. ತಾಲಿಬಾನಿಗಳು ಈಗ ಇಡೀ ದೇಶದಲ್ಲಿ ಹರಡಿದ್ದಾರೆ. ಅವರೆಲ್ಲರೂ ಒಂದೇ ಸಮಯದಲ್ಲಿ ಒಂದೇ ಕಡೆ ಸೇರಲು ಸಾಧ್ಯವಿಲ್ಲ. ಅವರಿಗೆ ದೊಡ್ಡಮಟ್ಟದ ಬೆಂಬಲ ಕೂಡ ಇಲ್ಲ ಅಂತ ಈ ಗ್ರೂಪ್​​ನ ವಕ್ತಾರ ಅಲಿ ಮೈಸಮ್ ನಜರಿ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply