ಗೋವುಗಳ ವಿಚಾರವಾಗಿ ವಿಪಕ್ಷಗಳಿಗೆ ಮೋದಿ ಮಾತಿನ ಬಾಣ!

masthmagaa.com:

ಗೋವುಗಳ ವಿಚಾರವಾಗಿ ಪ್ರಧಾನಿ ಮೋದಿ ಇವತ್ತು ವಿಪಕ್ಷಗಳನ್ನು ಮತ್ತೆ ತರಾಟೆಗೆ ತಗೊಂಡಿದ್ದಾರೆ. ವಾರಾಣಸಿಯಲ್ಲಿ 870 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಚಾಲನೆ ನೀಡಿ ಮಾತಾಡಿದ ಅವರು, ಕೆಲವರು ಗೋವುಗಳ ಬಗ್ಗೆ ಮಾತಾಡೋದೇ ಅಪರಾಧ ಅನ್ನೋ ರೀತಿ ಮಾಡ್ಬಿಟ್ಟಿದ್ದಾರೆ. ಆದ್ರೆ ನಮ್ಮಲ್ಲಿ ಗೋವುಗಳಿಗೆ ತಾಯಿಯ ಸ್ಥಾನ ಇದೆ. ಕೆಲವರು ಗೋವು ಮತ್ತು ಎಮ್ಮೆಗಳ ಬಗ್ಗೆ ಅಪಹಾಸ್ಯ ಮಾಡ್ತಾರೆ. ಆದ್ರೆ ದೇಶದ 8 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅವುಗಳೇ ಜೀವನಾಡಿ ಅನ್ನೋದನ್ನ ಮರೀತಾರೆ ಅಂತ ಹೇಳಿದ್ದಾರೆ. 6-7 ವರ್ಷ ಹಿಂದೆಗೆ ಹೋಲಿಸಿದ್ರೆ ದೇಶದಲ್ಲಿ ಹಾಲಿನ ಉತ್ಪಾದನೆ 45 ಪರ್ಸೆಂಟ್ ಜಾಸ್ತಿಯಾಗಿದೆ. ವಿಶ್ವದ ಹಾಲು ಉತ್ಪಾದನೆಯಲ್ಲಿ ಭಾರತ 22 ಪರ್ಸೆಂಟ್​​ನಷ್ಟು ಪಾಲು ಹೊಂದಿದೆ ಅಂತ ಪ್ರಧಾನಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply