ಸಾಲದ ಸುಳಿಯಲ್ಲಿ ತಮಿಳು ನಟ ವಿಶಾಲ್‌! ಫಿಲ್ಮ್​ ರಿಲೀಸ್​​ ಮಾಡುವಂತಿಲ್ಲ ಹೈಕೋರ್ಟ್‌ ತೀರ್ಪು..

masthmagaa.com:

ತಮಿಳು ನಟ ವಿಶಾಲ್‌ ಅವರಿಗೆ ಮದ್ರಾಸ್‌ ಹೈಕೋರ್ಟ್‌, ಲೈಕಾ ಪ್ರೊಡಕ್ಷನ್ಸ್‌ ಸಂಸ್ಥೆ ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ 15 ಕೋಟಿ ರೂಪಾಯಿಗಳ ದಂಡ ವಿಧಿಸಿದೆ.
ಅಷ್ಟಕ್ಕೂ ಇವರ ವಿರುದ್ಧ ದೂರು ದಾಖಲು ಮಾಡಿದ್ದವರು ಖ್ಯಾತ ನಿರ್ಮಾಪಕ, ಫೈನಾನ್ಷಿಯರ್ ಅನ್ಬುಚೆಳಿಯನ್. 2016 ರಲ್ಲಿ ವಿಶಾಲ್ ಅನ್ಬುಚೆಳಿಯನ್ ಅವರಿಂದ 15 ಕೋಟಿ ಮೊತ್ತದ ಸಾಲ ಪಡೆದಿದ್ರು. ಆ ಸಾಲಕ್ಕೆ ಬಡ್ಡಿ ಸೇರಿ ಬೆಳೆದು 21.60 ಕೋಟಿಯಾಗಿತ್ತು. ಆದ್ರೆ ಆ ಸಾಲವನ್ನ ವಿಶಾಲ್‌ ಮರುಪಾವತಿಸಿರ್ಲಿಲ್ಲ. ಆಗ ಮಧ್ಯ ಪ್ರವೇಶಿಸಿದ ಲೈಕಾ ಪ್ರೊಡಕ್ಷನ್, ನಾವು ಅನ್ಬುಚೆಳಿಯನ್ ಸಾಲ ತೀರಿಸುತ್ತೇವೆ, ನೀವು ನಮಗೆ ನಂತರ ವಾಪಸ್ ಮಾಡಿ, ಅಲ್ಲಿಯವರೆಗೆ ನಿಮ್ಮ ಸಿನಿಮಾಗಳಲ್ಲಿ ನಮಗೂ ಹಕ್ಕಿರುತ್ತದೆ” ಎಂದಿತ್ತು.

‘ತುಪ್ಪರಿವಾಳನ್ 2’ ಸಿನಿಮಾ ಬಿಡುಗಡೆ ತಡವಾಗಿದೆ ಸಿನಿಮಾ ಬಿಡುಗಡೆ ಆದ ಕೂಡಲೇ ಸಾಲ ತೀರಿಸುವುದಾಗಿ ಹೇಳಿದ್ದರು. ಆದರೆ ಕೊರೊನಾ ಕಾರಣದಿಂದ ‘ತುಪ್ಪರಿವಾಳನ್ 2’ ಇನ್ನೂ ಬಿಡುಗಡೆ ಆಗಿಲ್ಲ. ಅದಕ್ಕೆ ಮುನ್ನ ‘ಚಕ್ರ’ ಸಿನಿಮಾ ಬಿಡುಗಡೆ ಆಯಿತು. ಆಗ ‘ಚಕ್ರ’ ಸಿನಿಮಾದ ಲಾಭವನ್ನು ತಮಗೆ ನೀಡಬೇಕು ಎಂದು ಲೈಕಾ ಪ್ರೊಡೊಕ್ಷನ್ ಹೌಸ್ ಕೇಳಿತ್ತು ಅದಕ್ಕೆ ವಿಶಾಲ್‌ ನಿರಾಕರಿಸಿದ್ದಾರೆ. ಹೀಗಾಗಿ ಲೈಕಾ ಪ್ರೊಡಕ್ಷನ್ಸ್ ನ್ಯಾಯಾಲಯದಲ್ಲಿ ಕೇಸ್‌ ರೆಜಿಸ್ಟರ್‌ ಮಾಡಿದೆ. ಈಗ ಆ ಸಾಲಕ್ಕೂ ಬಡ್ಡಿ ಸೇರಿ 30 ಕೋಟಿಯಾಗಿದೆ. ಹೈಕೋರ್ಟ್‌ ಈಗ 3 ವಾರಗಳಲ್ಲಿ 15 ಕೋಟಿ ರೂಪಾಯಿ FDಗಿ ಪಾವತಿಸಬೇಕೆಂದು ಆದೇಶಿಸಿದೆ. ಅಲ್ಲಿಯವರೆಗೆ ವಿಶಾಲ್ ಫ್ಯಾಕ್ಟರಿ ಸಂಸ್ಥೆಯ ಸಿನಿಮಾಗಳನ್ನು ಥಿಯೇಟರ್‌, ಓಟಿಟಿಯಲ್ಲಿ ಪ್ರದರ್ಶಿಸದಂತೆ ನಿಷೇಧ ಹೇರಲಾಗಿದೆ.

-masthmagaa.com

Contact Us for Advertisement

Leave a Reply