ಸಂಸ್ಕೃತ ಮಾತ್ರವಲ್ಲ..ತಮಿಳು ಕೂಡ ದೇವಭಾಷೆ: ಮದ್ರಾಸ್ ಹೈಕೋರ್ಟ್​​

masthmagaa.com:

ಮದ್ರಾಸ್ ಹೈಕೋರ್ಟ್​ ತಮಿಳು ಭಾಷೆಯನ್ನು ದೇವಭಾಷೆ ಅಂತ ಕರೆದಿದೆ. ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಪಶುಪತೇಶ್ವರಸ್ವಾಮಿ ದೇಗುಲದಲ್ಲಿ ತಮಿಳಿನಲ್ಲಿ ಪ್ರಾರ್ಥನೆ ಮಾಡಲು, ಪ್ರಾರ್ಥನೆ ಗೀತೆಗಳನ್ನು ಪ್ರಸಾರ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು ಅಂತ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​​, ವಿಶ್ವದ ವಿವಿಧ ಮೂಲೆಗಳಲ್ಲಿ ವಿವಿಧ ರೀತಿಯ ಆಚರಣೆಗಳಿವೆ, ಧರ್ಮ ಇವೆ, ಸಂಸ್ಕೃತಿ ಇವೆ.. ಎಲ್ಲಾ ಕಡೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಪ್ರಾರ್ಥನೆ ಮಾಡಲಾಗುತ್ತೆ. ಆದ್ರೆ ಭಾರತದಲ್ಲಿ ಸಂಸ್ಕೃತ ಮಾತ್ರ ದೇವಭಾಷೆ, ಅದ್ರಲ್ಲಿ ಪ್ರಾರ್ಥನೆ ಮಾಡಿದ್ರೆ ಮಾತ್ರವೇ ದೇವರು ಕೇಳುತ್ತಾರೆ ಅಂತ ನಂಬಿಸಲಾಗಿದೆ. ಸಂಸ್ಕೃತ ಭಾಷೆ ಪ್ರಾಚೀನ ಸಾಹಿತ್ಯದೊಂದಿಗೆ ತನ್ನದೇ ಮಹತ್ವ ಹೊಂದಿದೆ ನಿಜ. ಆದ್ರೆ ಅದಕ್ಕೆ ಬೇರೆ ಯಾವುದೇ ಭಾಷೆ ಸಮಾನವಲ್ಲ ಅಂತ ಬಿಂಬಿಸಲಾಗಿದೆ. ಆದ್ರೆ ತಮಿಳು ವಿಶ್ವದ ಅತಿ ಪ್ರಾಚೀನ ಭಾಷೆ ಮಾತ್ರವಲ್ಲ.. ದೇವಭಾಷೆ ಕೂಡ ಹೌದು.. ಶಿವ ನೃತ್ಯ ಮಾಡುವಾಗ ಡಮರುವಿನಿಂದ ಬಿದ್ದು ತಮಿಳು ಭಾಷೆ ಹುಟ್ಟಿತು ಅನ್ನೋ ನಂಬಿಕೆ ಒಂದು ಕಡೆ ಇದ್ರೆ, ಮತ್ತೊಂದ್ಕಡೆ ಲಾರ್ಡ್ ಮುರುಗ ತಮಿಳು ಭಾಷೆ ಸೃಷ್ಟಿಸಿದ್ರು ಅಂತ ಕೂಡ ನಂಬಿಕೆ ಇದೆ. ಇದ್ರಿಂದ ತಮಿಳು ಭಾಷೆ ಮತ್ತು ದೇವರಿಗೆ ಇರೋ ಕನೆಕ್ಷನ್ ಗೊತ್ತಾಗುತ್ತೆ. ಹೀಗಾಗಿ ದೇಶದಾದ್ಯಂತ ದೇವಾಲಯಗಳಲ್ಲಿ ಅಳ್ವರ್, ನಯನ್ಮಾರ್​​ ಮತ್ತು ಅರುಣಾಗಿರಿನಾಥರ್​​​ರಂತ ಸಂತರು ರಚಿಸಿದ ಪ್ರಾರ್ಥನೆಗಳನ್ನು ಹಾಡಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply