ಕರ್ನಾಟಕವನ್ನ ಹಿಂದಿಕ್ಕಿದ ತಮಿಳುನಾಡು!

masthmagaa.com:
ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ರಫ್ತಿನಲ್ಲಿ ಕರ್ನಾಟಕವನ್ನ ಹಿಂದಿಕ್ಕಿರೋ ತಮಿಳುನಾಡು ನಂಬರ್‌ ಒನ್‌ ಸ್ಥಾನಕ್ಕೇರಿದೆ. ತಮಿಳುನಾಡಿನ ಎಲೆಕ್ಟ್ರಾನಿಕ್ಸ್‌ ರಫ್ತಿನ ಮೌಲ್ಯ 5.37 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 44 ಸಾವಿರ ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ 4ನೇ ಸ್ಥಾನದಲ್ಲಿದ್ದ ತಮಿಳುನಾಡು ಕೇವಲ ಒಂದೇ ವರ್ಷದಲ್ಲಿ ಹೆಚ್ಚಿಸಿಕೊಂಡು ಮೊದಲ ಸ್ಥಾನ ಪಡೆದುಕೊಂಡಿದ್ದು, ಎರಡು ವರ್ಷಗಳ ಒಟ್ಟು ಬೆಳವಣಿಗೆ ದರ 233% ಆಗಿದೆ. ಇನ್ನು ಎಲೆಕ್ಟ್ರಾನಿಕ್ಸ್‌ ರಫ್ತಿನಲ್ಲಿ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply