ಕ್ಯಾನ್ಸರ್‌ಗೆ TATA ಔಷಧಿ! ವಾಪಸ್ಸಾಗದಿರಲು ಮಾತ್ರೆ ಸಿದ್ದ!

masthmagaa.com:

ಕ್ಯಾನ್ಸರ್‌ನಿಂದ ಗುಣಮುಖರಾದವ್ರಲ್ಲಿ ಮತ್ತೊಮ್ಮೆ ಕ್ಯಾನ್ಸರ್‌ ವಾಪಾಸ್‌ ಆಗೋದನ್ನ ತಡೆಯೋಕೆ ಇದೀಗ ಭಾರತದಲ್ಲಿ ಹೊಸ ಮಾತ್ರೆಯೊಂದನ್ನ ಡೆವೆಲಪ್‌ ಮಾಡಲಾಗಿದೆ. ಹೀಗಂತ ಮುಂಬೈನ ಪ್ರಸಿದ್ಧ ಕ್ಯಾನ್ಸರ್‌ ರಿಸರ್ಚ್‌ & ಟ್ರೀಟ್‌ಮೆಂಟ್‌ ಸಂಸ್ಥೆ ಟಾಟಾ ಇನ್ಸ್ಟಿಟ್ಯುಟ್‌ ಹೇಳ್ಕೊಂಡಿದೆ. ಈ ಸಂಸ್ಥೆಯ ರಿಸರ್ಚರ್ಸ್‌ ಮತ್ತು ಡಾಕ್ಟರ್ಸ್‌ ಸತತ 10 ವರ್ಷಗಳ ಕಾಲ ಇದಕ್ಕಾಗಿ ಕೆಲಸ ಮಾಡಿ ಮಾತ್ರೆಯೊಂದನ್ನ ಕಂಡುಹಿಡಿದಿದ್ದಾರೆ. ಅಷ್ಟೇ ಅಲ್ದೇ ಈ ಮಾತ್ರೆ ಮೂಲಕ ರೇಡಿಯೇಷನ್‌ ಮತ್ತು ಕೀಮೋಥೆರಪಿಯಿಂದಾಗೋ ಸೈಡ್‌ ಇಫೆಕ್ಟ್‌ಗಳನ್ನ ಕೂಡ ಸುಮಾರು 50% ವರೆಗೆ ಕಡಿಮೆ ಮಾಡ್ಬೋದು. ಸದ್ಯ ಈ ಮಾತ್ರೆ ಮಾರ್ಕೆಟ್‌ ಪ್ರವೇಶಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಪ್ರೂವಲ್‌ಗೆ ವೈಟ್‌ ಮಾಡ್ತಿದೆ.

-masthmagaa.com

Contact Us for Advertisement

Leave a Reply