ಉತ್ತರಾಖಂಡ: ಟನಲ್‌ ದುರಂತದ ರಕ್ಷಣಾ ಕಾರ್ಯಚರಣೆಗೆ ಎಕ್ಸ್ಪರ್ಟ್ಸ್‌ ಎಂಟ್ರಿ! ನರೇಂದ್ರ ಮೋದಿ ಫೋನ್‌ ಕಾಲ್‌ನಲ್ಲಿ ಹೇಳಿದ್ದೇನು?

masthmagaa.com:

ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದ ಟನಲ್‌ ದುರಂತಕ್ಕೆ ಸಿಲುಕಿ ನರಳ್ತಿರೋ 41 ಕಾರ್ಮಿಕರ ರಕ್ಷಣಾ ಕಾರ್ಯಚರಣೆ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳಾದ್ರೂ ಸಿಲುಕಿಕೊಂಡಿರೋ ಕಾರ್ಮಿಕರ ರಕ್ಷಣೆಗೆ ಹಲವು ಸಂಕಷ್ಟಗಳು ಎದುರಾಗ್ತಿದ್ದು, ನಿಧಾನ ಗತಿಯಲ್ಲಿ ಸಾಗ್ತಿದೆ. ಆದ್ರೆ ಇದೀಗ ಕಾರ್ಮಿಕರ ರಕ್ಷಣೆಯಲ್ಲಿ ಒಂದು ಪಾಸಿಟಿವ್‌ ಹೋಪ್ಸ್‌ ಬಂದಿದೆ. ಯಾಕಂದ್ರೆ ಕಾರ್ಮಿಕರ ರಕ್ಷಣೆಗಾಗಿ ಇಂಟರ್‌ನ್ಯಾಷನಲ್‌ ಟೀಮ್‌ ಆಫ್‌ ಟನಲಿಂಗ್‌ ಎಕ್ಸ್‌ಪರ್ಟ್ಸ್‌ ಇಂದು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಇಂಟರ್‌ನ್ಯಾಷನಲ್‌ ಟನಲಿಂಗ್‌ & ಅಂಡರ್‌ಗ್ರೌಂಡ್‌ ಸ್ಪೇಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಖ್ಯಾತ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಕೂಡ ಈ ತಜ್ಞರ ತಂಡದಲ್ಲಿ ಒಬ್ಬರಾಗಿದ್ದಾರೆ. ಇತ್ತ ಕಾರ್ಮಿಕರ ರಕ್ಷಣಾ ಕಾರ್ಯಚರಣೆ ಕುರಿತು ಉತ್ತರಾಖಂಡದ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಜೊತೆ ಪ್ರಧಾನಿ ನರೇಂದ್ರ ಮೋದಿ ಫೋನ್‌ ಕಾಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾರ್ಮಿಕರ ರಕ್ಷಣೆಗೆ ಬೇಕಾದ ಎಲ್ಲಾ ತರಹದ ಸಲಕರಣೆಗಳು ಮತ್ತು ಸಂಪನ್ಮೂಲಗಳನ್ನ ಕೇಂದ್ರ ಸರ್ಕಾರ ಒದಗಿಸುತ್ತೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply