ಚೀನಾದಲ್ಲಿ ಟೆಸ್ಲಾ ಕಾರುಗಳು ಬ್ಯಾನ್!

masthmagaa.com:

ಚೀನಾದಲ್ಲಿ ಟೆಸ್ಲಾ ಕಾರುಗಳನ್ನು ಬ್ಯಾನ್ ಮಾಡಲಾಗಿದೆ. ಚೀನಾಗೆ ಕಾರು ಪ್ರವೇಶಿಸದಂತೆ ಚೀನಾ ಮಿಲಿಟರಿ ನಿರ್ಬಂಧ ಹೇರಿದೆ. ಟೆಸ್ಲಾದ ಕಾರುಗಳಲ್ಲಿ ಕ್ಯಾಮೆರಾಗಳಿದ್ದು, ಇದೇ ಕಾರಣಕ್ಕೆ ಚೀನಾ ಮಿಲಿಟರಿ ಈ ನಿರ್ಧಾರ ಕೈಗೊಂಡಿದೆ ಅಂತ ಹೇಳಲಾಗ್ತಿದೆ. ಅಂದ್ರೆ ಗೂಢಾಚಾರಿಕೆ ಮಾಡುತ್ತೆ ಅನ್ನೋ ಭಯದಿಂದಾಗಿ ಭದ್ರತೆಯ ನೆಪ ನೀಡಿದೆ..

ಆದ್ರೆ ಈ ಬಗ್ಗೆ ಚೀನಾ ಅಭಿವೃದ್ಧಿ ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿರುವ ಟೆಸ್ಲಾ ಮಾಲೀಕ ಎಲಾನ್ ಮಸ್ಕ್​​, ಟೆಸ್ಲಾ ಕಂಪನಿಯ ಕಾರು ಚೀನಾ ಅಥವಾ ಬೇರೆ ಎಲ್ಲಾದ್ರೂ ಗೂಢಾಚಾರಿಕೆಯ ಕೆಲಸ ಮಾಡಿದ್ರೆ ಸಂಸ್ಥೆಯನ್ನೇ ಮುಚ್ಚಲಾಗುತ್ತೆ. ಜಗತ್ತಿನ ಎರಡು ಶಕ್ತಿಶಾಲಿ ಆರ್ಥಿಕತೆಗಳ ನಡುವೆ ನಂಬಿಕೆ ಇರಬೇಕು ಅಂತ ಹೇಳಿದ್ದಾರೆ. ಚೀನಾ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ತುಂಬಾ ದೊಡ್ಡ ಮಾರುಕಟ್ಟೆ.. ಕಳೆದ ವರ್ಷ ಇಲ್ಲಿ ಟೆಸ್ಲಾ ಕಾರು ಮಾರಾಟ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ಒಂದೇ ವರ್ಷದಲ್ಲಿ 147,445 ಕಾರುಗಳು ಮಾರಾಟವಾಗಿವೆ..

-masthmagaa.com

Contact Us for Advertisement

Leave a Reply