ಕೊರೋನಾ ಎರಡನೇ ಅಲೆ ಸಂಕೇತ.. 8 ರಾಜ್ಯಗಳಿಗೆ ಕೇಂದ್ರದಿಂದ ಸಂದೇಶ

masthmagaa.com:

ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುಮುಖವಾಗಿ ಸಾಗ್ತಿದೆ. ನಿನ್ನೆ ಮೊನ್ನೆವರೆಗೆ 14 ಸಾವಿರ, 15 ಸಾವಿರ ಜನರಿಗೆ ಪಾಸಿಟಿವ್ ಬರ್ತಿತ್ತು. ಇವತ್ತು ಆ ಸಂಖ್ಯೆ 18 ಸಾವಿರ ಗಡಿ ದಾಟಿ ಹೋಗಿದೆ. ಅಂದ್ರೆ ಒಂದೇ ದಿನ 18 ಸಾವಿರ ಜನರಿಗೆ ಸೋಂಕು ದೃಢಪಟ್ಟಿದೆ. ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ 82 ಪರ್ಸೆಂಟ್​ ಕೇಸ್​​ ಕೇವಲ 5 ರಾಜ್ಯದಲ್ಲೇ ವರದಿಯಾಗಿದೆ. ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪಂಜಾಬ್.. ಮಹಾರಾಷ್ಟ್ರ ಒಂದರಲ್ಲೇ 10 ಸಾವಿರಕ್ಕೂ ಹೆಚ್ಚು ಕೇಸ್ ದೃಢಪಟ್ಟಿದೆ. ಅದ್​ ಬಿಟ್ರೆ ಕೇರಳದಲ್ಲಿ 2,700 ಚಿಲ್ರೆ ಪ್ರಕರಣ.

ಇನ್ನು ಸಕ್ರಿಯ ಪ್ರಕರಣಗಳು ಹೆಚ್ಚಿರುವ 8 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ (ಟೆಸ್ಟ್, ಟ್ರೇಸ್ ಅಂಡ್ ಟ್ರೀಟ್​) ನೀಡುವತ್ತ ಹೆಚ್ಚಿನ ಗಮನ ಕೊಡಿ ಅಂತ ಕೇಂದ್ರ ಸರ್ಕಾರ ಸೂಚಿಸಿದೆ. ಹರಿಯಾಣ, ಆಂಧ್ರಪ್ರದೇಶ, ಒಡಿಶಾ, ಹಿಮಾಚಲ ಪ್ರದೇಶ, ಉತ್ತರಾಖಂಡ್, ದೆಹಲಿ ಮತ್ತು ಚಂಡೀಗಢಕ್ಕೆ ಈ ಸೂಚನೆ ನೀಡಲಾಗಿದೆ. ಜೊತೆಗೆ ಈ ರಾಜ್ಯಗಳ ಒಟ್ಟು 63 ಜಿಲ್ಲೆಗಳಲ್ಲಿ ಪರೀಕ್ಷೆ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದೆ. ಅದೇ ರೀತಿ ಪ್ರಕರಣಗಳ ಸಂಖ್ಯೆ ಕೂಡ ಜಾಸ್ತಿಯಾಗ್ತಿದೆ ಅಂತ ಎಚ್ಚರಿಸಿದೆ. ಅದ್ರಲ್ಲೂ ಮಹಾರಾಷ್ಟ್ರ ಮತ್ತು ಪಂಜಾಬ್​ಗೆ ಕೇಂದ್ರದ ತಂಡಗಳನ್ನ ಕಳಿಸಲಾಗಿದೆ.

-masthmagaa.com

Contact Us for Advertisement

Leave a Reply