ಹೊಸ ಪಾರ್ಟಿಗೆ ಹೆಸರಿಟ್ಟ ತಮಿಳು ಸೂಪರ್‌ಸ್ಟಾರ್ ತಲಬದಿ ವಿಜಯ್‌!

masthmagaa.com:

ತಮಿಳು ಸೂಪರ್‌ಸ್ಟಾರ್‌ ತಲಬದಿ ವಿಜಯ್‌ ತಮ್ಮ ನೂತನ ರಾಜಕೀಯ ಪಕ್ಷದ ಹೆಸರನ್ನ ತಿವೀಲ್‌ ಮಾಡಿದ್ದಾರೆ. ತಮಿಳಗ ವೆಟ್ರಿ ಕಳಗಮ್‌ (TVK), ಅಂದ್ರೆ ತಮಿಳರ ಗೆಲುವಿನ ಪಕ್ಷ ಅಂತ ಪಾರ್ಟಿಗೆ ಹೆಸರಿಟ್ಟುಕೊಂಡಿದ್ದಾರೆ. ಅಲ್ಲದೆ ತಮ್ಮ ಮುಂದಿನ ಚಿತ್ರ ʻಗೋಟ್‌ʼ ನಂತರ ಸಿನೆಮಾಗೆ ಗುಡ್‌ಬೈ ಹೇಳಿ ಫುಲ್‌ ಟೈಂ ರಾಜಕೀಯಕ್ಕೆ ಇಳಿಯೋದಾಗಿ ಅನೌನ್ಸ್‌ ಮಾಡಿದ್ದಾರೆ. ವಿಜಯ್‌ ಈ ಬಗ್ಗೆ ಸ್ಟೇಟ್‌ಮೆಂಟ್‌ ನೀಡಿ, ʻತಮಿಳುನಾಡು ರಾಜಕೀಯದಲ್ಲಿ ಒಂದು ಕಡೆ ನಿಷ್ಕ್ರಿಯ ಆಡಳಿತ ಹಾಗೂ ಭ್ರಷ್ಟ ಪೊಲಿಟಿಕಲ್‌ ಕಲ್ಚರ್‌ ಇದೆ. ಇನ್ನೊಂದು ಕಡೆ ಜಾತಿ, ಮತ, ಧರ್ಮ ಅಂತ ಜನರನ್ನ ಒಡೆಯೋ ಕೆಲಸ ಆಗ್ತಾ ಇದೆ. ಇವೆರಡರಿಂದ್ಲೂ ಅಭಿವೃದ್ಧಿಗೆ ಒಡೆತ ಬೀಳತ್ತೆ. ಸೋ ರಾಜ್ಯದಲ್ಲಿ ಬದಲಾವಣೆ ಬರ್ಬೇಕು. ನಿಸ್ವಾರ್ಥ, ಪ್ರಾಮಾಣಿಕ, ಜಾತ್ಯಾತೀತ ಹಾಗೂ ಪ್ರತಿಭಾವಂತರಿರೋ ಪಾರ್ಟಿ ಅಧಿಕಾರಕ್ಕೆ ಬರ್ಬೇಕು ಅಂದಿದ್ದಾರೆ.

-masthmagaa.com

Contact Us for Advertisement

Leave a Reply