ನನ್ನ ಹೆಂಡ್ತಿ ನಿರೀಕ್ಷೆ ಅದು, ಆದ್ರೆ ವಾಸ್ತವ ಇದು; ಸೂಪರ್‌ ಸ್ಟಾರ್‌ ಯಶ್‌ !

masthamgaa.com:

ಸೂಪರ್‌ ಸ್ಟಾರ್‌ ಯಶ್‌ ಅವರು ಹೆಂಡತಿ ರಾಧಿಕಾ ಪಂಡಿತ್‌ ಅವರೊಂದಿಗಿನ ಪೋಟೋ ಒಂದನ್ನು ಹಂಚಿಕೊಂಡು ಎಕ್ಸ್ಪೆಕ್ಟೇಶನ್‌ ವರ್ಸ್‌ಸ್‌ ರಿಯಾಲಿಟಿ ಅಂತ ಬರೆದುಕೊಂಡಿದ್ದಾರೆ.

ಮೊದಲ ಪೋಟೋದಲ್ಲಿ ರಾಧಿಕಾ ಪಂಡಿತ್‌ ಹಾಗೂ ಯಶ್‌ ಇಬ್ಬರೇ, ಸುಂದರವಾದ ಎರಡು ಬದಿಯಲ್ಲಿ ಹಳದಿ ಹೂವುಗಳಿಂದ ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಈ ರೀತಿ ರಾಧಿಕಾ ಪಂಡಿತ್‌ ಅವರು ಇರಲು ಇಷ್ಟ ಪಡುತ್ತಾರೆ.

ಆದ್ರೆ ಇನ್ನೊಂದು ಪೋಟೋದಲ್ಲಿ ಮಕ್ಕಳಿಬ್ಬರನ್ನು ರಾಧಿಕಾ ಪಂಡಿತ್‌ ಹಾಗೂ ಯಶ್‌ ಕೈಯಲ್ಲಿ ಎತ್ತಿಕೊಂಡು ಅವರ ತರಲೆಗಳನ್ನು ಸಹಿಸುತ್ತಾ ಪ್ರೀತಿಯಿಂದ ನಡೆದು ಬರುತ್ತಿದ್ದಾರೆ. ಆದ್ರೆ ಇದು ನೈಜತೆ ಎಂದು ಯಶ್‌ ಬಿದ್ದು ಬಿದ್ದು ನಗುವ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply