ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಂದಲೇ ಶಿಕ್ಷಕರಿಗೆ ಶಿಕ್ಷೆ!

masthmagaa.com:

ಶಾಲೆಗಳಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಬಸ್ಕಿ ಹೊಡೆಯೊದು, ಶಿಕ್ಷಕರಿಂದ ಪೆಟ್ಟು ತಿನ್ನೋದು ಸಾಮಾನ್ಯ ವಿಚಾರ. ಆದ್ರೆ ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಪೆಟ್ಟು ಕೊಡೊ ಮೂಲಕ ಶಿಕ್ಷೆ ನೀಡೊ ವಿಭಿನ್ನ ವ್ಯವಸ್ಥೆ ಶಿವಮೊಗ್ಗದ ಶಾಲೆಯೊಂದರಲ್ಲಿದೆ. ಅಲ್ಲಿನ ಹೊಸನಗರ ಬಳಿಯ ಹಾಲಂದೂರಿನ ಸರ್ಕಾರಿ ಶಾಲೆಯಲ್ಲಿ ಈ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳನ್ನ ಜಾಣರನ್ನಾಗಿಸಲು ಶಿಕ್ಷಕರು ಈ ಕಾರ್ಯತಂತ್ರ ಮಾಡ್ತಿದ್ದಾರೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply