ಹಾರುವ ತಟ್ಟೆಗೂ ಏಲಿಯನ್​ಗೂ ಸಂಬಂಧ ಇದೆಯೇ? ಇಲ್ಲವೇ?

masthmagaa.com:

ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳು ಇದಿಯೋ, ಇಲ್ವೋ ಅನ್ನೋದಕ್ಕೆ ಇದುವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೆಲವರು ಇದೆ ಅಂದ್ರೆ, ಇನ್ನೂ ಕೆಲವರು ಇಲ್ಲ ಅಂತಾರೆ. ಆದ್ರೆ ಆಗಸದಲ್ಲಿ ಆಗಾಗ ಕಾಣಸಿಗೋ ಅಪರೂಪದ ವಿದ್ಯಮಾನಗಳು, ಅಂದ್ರೆ ಹಾರುವ ತಟ್ಟೆ ಮಾದರಿಯಲ್ಲಿ ಏನಾದ್ರೂ ಕಂಡ್ರೆ ಏಲಿಯನ್​ಗಳು ಇವೆ ಅನ್ನೋ ವಾದಕ್ಕೆ ಮತ್ತಷ್ಟು ಪುಷ್ಠಿ ಸಿಗುತ್ತೆ. ಹೀಗೆ ಆಗಸದಲ್ಲಿ ನಡೆಯೋ ಅನ್​ಐಡೆಂಟಿಫೈಯ್ಡ್ ಏರಿಯಲ್ ಫೆನೋಮೆನಾ ಅಥವಾ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳ ಹಲವು ವಿಡಿಯೋಗಳು ಅಮೆರಿಕದ ನೌಕಾಪಡೆಯ ಪೈಲಟ್​ಗಳ ಬಳಿ ಇತ್ತು. ಕಳೆದ ಕೆಲ ವರ್ಷಗಳಲ್ಲಿ ಹಾರುವ ತಟ್ಟೆ ಮಾದರಿಯ ಕೆಲವೊಂದು ವಿಡಿಯೋಗಳನ್ನ ಬಿಡುಗಡೆ ಕೂಡ ಮಾಡಿತ್ತು. ಆದ್ರೀಗ ನೌಕಾಪಡೆ ಪೈಲಟ್​ಗಳಿಗೆ ಕಾಣಿಸಿ, ಅವರು ರೆಕಾರ್ಡ್​ ಮಾಡಿದ್ದು ಏಲಿಯನ್ ಸ್ಪೇಸ್​ಕ್ರಾಫ್ಟ್​ಗಳು ಅನ್ನೋದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ಅಮೆರಿಕದ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ ಅಂತ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಹಾಗಿದ್ರೆ ಪೈಲಟ್​ಗಳು ನೋಡಿದ್ದು ಏನು ಅನ್ನೋದನ್ನ ಸರ್ಕಾರದ ವರದಿಯಲ್ಲಿ ಉಲ್ಲೇಖಿಸಿಲ್ಲ. ಅಂದ್ಹಾಗೆ ಈ ವರದಿಯನ್ನ ಜೂನ್ 25ನೇ ತಾರೀಖು ಅಮೆರಿಕ ಕಾಂಗ್ರೆಸ್​ನಲ್ಲಿ ಜೋ ಬೈಡೆನ್ ಈ ವರದಿಯನ್ನ ಬಿಡುಗಡೆ ಮಾಡಲಿದ್ದಾರೆ. ಅದಕ್ಕೂ ಮೊದಲೇ ವರದಿಯಲ್ಲಿರೋ ಕೆಲವೊಂದು ವಿಚಾರ ಬಹಿರಂಗವಾಗಿದೆ. ಒಟ್ಟು ಪರಿಶೀಲಿಸಿರೋ ವಿಡಿಯೋಗಳಲ್ಲಿ 120ಕ್ಕೂ ಹೆಚ್ಚು ವಿಡಿಯೋಳು ಅಮೆರಿಕ ನೌಕಾಪಡೆ ಸಿಬ್ಬಂದಿಯಿಂದಲೇ ಬಂದಿದೆ ಅಂತ ಗೊತ್ತಾಗಿದೆ. ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಟೈಮ್ಸ್​ಗೆ ನೀಡಿದ ಮಾಹಿತಿ ಪ್ರಕಾರ, ಚೀನಾ ಅಥವಾ ರಷ್ಯಾ ದೇಶಗಳು ಹೈಪರ್​ಸಾನಿಕ್​ ಟೆಕ್ನಾಲಜಿಯ ಎಕ್ಸ್​ಪರಿಮೆಂಟ್ ಮಾಡ್ತಿರಬಹುದು. ಅದು ಅನ್​ಐಡೆಂಟಿಫೈಡ್​ ಏರಿಯಲ್ ಫೆನೋಮಿನಾಗೆ ಕಾರಣವಾಗಿರಬಹುದು. ಈ ಬಗ್ಗೆಯೂ ಅಮೆರಿಕದ ಗುಪ್ತಚರ ಮತ್ತು ಸೇನಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಅಂತ ಹೇಳಿದ್ದಾರೆ. ಈ ವರದಿಯಲ್ಲಿ ಬೇರೆ ಯಾವೆಲ್ಲಾ ವಿಚಾರಗಳಿವೆ ಅನ್ನೋದು ಜೂನ್ 25ನೇ ತಾರೀಖು ಗೊತ್ತಾಗಲಿದೆ. ಅಂದ್ಹಾಗೆ ಆಕಾಶದಲ್ಲಿ ಕಾಣುವ ವಿಶೇಷ ವಿದ್ಯಮಾನಗಳ ಬಗ್ಗೆ ಅಧ್ಯಯನ ನಡೆಸೋಕೆ ಅಂತಾನೇ ಅನ್​ಐಡಿಂಟಿಫೈಯ್ಡ್ ಏರಿಯಲ್ ಫೆನೋಮಿನಾ ಟಾಸ್ಕ್​ ಫೋರ್ಸ್ ಇದೆ ಅಂತ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗಾನ್ ಈ ಹಿಂದೆನೇ ಹೇಳಿದೆ.

-masthmagaa.com

Contact Us for Advertisement

Leave a Reply