“ನಿನ್ನಂತ ಅಣ್ಣ ಯಾರಿಲ್ಲ”: ಯೋಗಿ ಆದಿತ್ಯನಾಥ್‌ಗೆ ಕಂಗನಾ ಟ್ಟೀಟ್‌

masthmagaa.com:

ಬಾಲಿವುಡ್‌ನ ಕ್ವೀನ್ ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ತಮ್ಮ ‘ಎಮರ್ಜೆನ್ಸಿ’ ಚಿತ್ರಕ್ಕಾಗಿ ಸಾಕಷ್ಟು ಪ್ರಮೋಷನ್ಸ್‌ಗಳಲ್ಲಿ ಬ್ಯುಸಿ ಇದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಮುಖಾಂತರ ಯಾವಾಗಲೂ ಅಭಿಮಾನಿಗಳೊಂದಿಗೆ ಟಚ್‌ನಲ್ಲಿ ಇರ್ತಾರೆ. ಕಂಗನಾ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳ್ತಾ ಇರ್ತಾರೆ. ನಟಿ ತಮ್ಮ ಟ್ವಿಟರ್ ಅಕೌಂಟನಲ್ಲಿ ಸಿಎಂ ಯೋಗಿಯವರನ್ನ ಹಾಡಿ ಹೊಗಳಿದ್ದಾರೆ, ಆದರೆ ಹೊಗಳಲು ಕಾರಣವೇನು, ನೋಡೋಣ.

ಇತ್ತೀಚೆಗಷ್ಟೇ ಝಾನ್ಸಿಯಲ್ಲಿ ಉಗ್ರಗಾಮಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಅಹ್ಮದ್ ಎನ್ಕೌಂಟರ್ ಆಗಿದ್ದು, ರಾಜಕೀಯ ವಲಯದಲ್ಲಿ ಮಾತ್ರವಲ್ಲದೇ ಮನರಂಜನಾ ಲೋಕದಲ್ಲೂ ಸಂಚಲನ ಮೂಡಿಸಿದೆ. ಇದೇ ವೇಳೆ ಬಾಲಿವುಡ್‌ನ ವಿವಾದದ ಕ್ವೀನ್ ಕಂಗನಾ ರಣಾವತ್ ಅವರು ಯೋಗಿ ಆದಿತ್ಯನಾಥ್‌ಗೆ ನನ್ನ ಸಹೋದರನಂತೆ ಯಾರೂ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಕಂಗನಾ ತಮ್ಮ ಟ್ವಿಟರ್‌ನಲ್ಲಿ ಯೋಗಿ ಆದಿತ್ಯನಾಥ್ ಅವರ ಹುರುಪಿನ ಭಾಷಣದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ‘ಮಾಫಿಯಾಗಳ ಹೆಸರುಗಳು ಬಯಲಿಗೆ ಬರುತ್ತಿವೆ’ ನಮ್ಮ ಸರ್ಕಾರ ಮಾಫಿಯಾದ ಬೆನ್ನು ಮುರಿಯುವ ಕೆಲಸ ಮಾಡುತ್ತಿದೆ. ಮಾಫಿಯಾವನ್ನ ಮಣ್ಣಿನಲ್ಲಿ ಹೂತು ಹಾಕ್ತೀವಿ” ಅಂತ ಹೇಳಿದ್ದಾರೆ.

ಈ ವಿಡಿಯೋವನ್ನು ಶೇರ್ ಮಾಡಿರುವ ಕಂಗನಾ, ‘ನನ್ನ ಸಹೋದರನಂತೆ ಯಾರೂ ಇಲ್ಲ’ ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ, ಅವರು ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಕಳೆದ ವರ್ಷ ಎರಡನೇ ಬಾರಿಗೆ ಚುನಾವಣೆಯಲ್ಲಿ ಗೆದ್ದ ನಂತರ ಕಂಗನಾ ಯೋಗಿ ಅವರನ್ನು ಭೇಟಿಯಾಗಿದ್ದರು ಎಂದು ಹೇಳಿ ತಮ್ಮ ಭೇಟಿಯ ಚಿತ್ರಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಕಂಗನಾ ಅವರ ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಸಾಲು ಸಾಲು ಕಾಮೆಂಟ್‌ಗಳು ಬರ್ತಾ ಇದೆ.

ಇನ್ನು ಕಂಗನಾ ಅವರ ಮುಂದಿನ ಚಿತ್ರ “ಎಮರ್ಜನ್ಸಿ” ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ಕಂಗನಾ ಅವರೇ ನಿರ್ದೇಶಿಸಿದ್ದಾರೆ. ಈ ಚಿತ್ರವು 1977 ರ ಭಾರತೀಯ ತುರ್ತು ಪರಿಸ್ಥಿತಿಯನ್ನು ಆಧರಿಸಿದೆ. ಚಿತ್ರದಲ್ಲಿ ಕಂಗನಾ ಅವರು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply