3ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ! ಆದ್ರೆ ಲಸಿಕೆ ಹಾಕಿಸಿಕೊಳ್ಳಲು ಬರಬೇಡಿ!

masthmagaa.com:

ಕೊರೋನಾ ಮಿಂಚಿನ ಓಟದ ನಡುವೆ ಇವತ್ತು 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕುವ ದೊಡ್ಡ ಅಭಿಯಾನಕ್ಕೆ ಹೆಸರಿಗೆ ಮಾತ್ರ ಚಾಲನೆ ಸಿಕ್ಕಿದೆ. ಸಿಎಂ ಯಡಿಯೂರಪ್ಪ ಶಿವಾಜಿನಗರದ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿ, ಸಾಂಕೇತಿಕವಾಗಿ 3ನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಹಾಗಂತ ನಮ್ಗೂ ಬೇಕು ಅಂತ ನಾವು ನೀವೆಲ್ಲಾ ಲಸಿಕೆ ಕೇಂದ್ರಕ್ಕೆ ಹೋದ್ರೆ ಮುಖ ಸಣ್ಣ ಮಾಡಿಕೊಂಡು ವಾಪಸ್ ಬರಬೇಕಾಗುತ್ತೆ.. ಯಾಕಂದ್ರೆ 18 ವರ್ಷ ಮೇಲ್ಪಟ್ಟವರು ಆರೋಗ್ಯ ಸೇತು ಮತ್ತು ಕೋವಿನ್ ಆಪ್​​ನಲ್ಲಿ ರಿಜಿಸ್ಟರ್ ಮಾಡಿಸಿ, ಅಪಾಯಿಂಟ್ ಮೆಂಟ್ ತಗೊಂಡು ಹೋದ್ರೆ ಮಾತ್ರ ಲಸಿಕೆ ಸಿಗುತ್ತೆ. ಲಸಿಕೆ ಕೇಂದ್ರದಲ್ಲೇ ಹೋಗಿ ರಿಜಿಸ್ಟರ್ ಮಾಡಿಸಿ ಲಸಿಕೆ ತಗೊಳ್ಳಕ್ಕೆ ಆಗಲ್ಲ.. ಆದ್ರೆ ಈ ಆನ್​ಲೈನ್​ ಮೂಲಕ ಲಸಿಕೆ ಹಾಕಿಸಿಕೊಳ್ಳೋಕೆ ಅಪಾಯಿಂಟ್​​ಮೆಂಟ್ ಸಿಗ್ತಾ ಇಲ್ಲ. ರಿಜಿಸ್ಟರ್ ಆಗುತ್ತೆ.. ಪಿನ್ ಕೋಡ್ ಕೇಳುತ್ತೆ.. ಡೇಟ್ ಟೈಂ ಕೇಳುತ್ತೆ.. ಆದ್ರೆ ಕ್ಲಿಕ್ ಮಾಡಿದ್ರೆ ಈ ಸೆಂಟರ್​ನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಲಸಿಕೆ ಹಾಕಲಾಗುತ್ತೆ ಅಂತ ಬರ್ತಾ ಇದೆ. ಅಂದ್ರೆ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬ್ಲೇಮ್ ಗೇಮ್ ಆಡ್ತಾ ಇವೆ.. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಬಳಿ ಇನ್ನೂ 1 ಕೋಟಿ ಡೋಸ್ ಲಸಿಕೆ ಸ್ಟಾಕ್ ಇದೆ. ಅದ್ರಲ್ಲೇ 18 ವರ್ಷ ಮೇಲ್ಪಟ್ಟವರಿಗೂ ಹಾಕಲಿ ಅಂತಿದೆ. ಆದ್ರೆ ರಾಜ್ಯ ಸರ್ಕಾರಗಳು ಮಾತ್ರ ನಮ್ಮ ಬಳಿ ಲಸಿಕೆ ಸ್ಟಾಕ್ ಇಲ್ಲವೇ ಇಲ್ಲ ಅಂತಿದೆ. 18 ವರ್ಷ ಮೇಲ್ಪಟ್ಟವರಿಗೆ ಬಿಡಿ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕೋಕೆ ಸಾಧ್ಯವಾಗದೇ ಕೆಲ ಲಸಿಕೆ ಕೇಂದ್ರಗಳನ್ನೇ ಮುಚ್ಚಿವೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನ, ಜಾರ್ಖಂಡ್ ಮತ್ತು ಪಂಜಾಬ್​​ನಲ್ಲಿ ಲಸಿಕೆ ಕೊರತೆ ಇದೆ. ಈ ನಡುವೆ ದೆಹಲಿಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕೋ ಕೇಂದ್ರಗಳನ್ನು ತೆರೆಯೋ ಸಾಧ್ಯತೆ ಇದೆ..

-masthmagaa.com

Contact Us for Advertisement

Leave a Reply