ಈ ವಿಡಿಯೋದ ಅಸಲಿಯತ್ತು ಬಯಲು! ಟ್ವಿಟ್ಟರ್ ವಿರುದ್ಧವೂ ಕೇಸ್!

masthmagaa.com:

ಇತ್ತೀಚೆಗೆ ಒಂದು ವಿಡಿಯೋ ತುಂಬಾ ವೈರಲ್ ಆಗಿತ್ತು. ಉತ್ತರ ಪ್ರದೇಶದಲ್ಲಿ ಓರ್ವ ವಯಸ್ಸಾದ ವ್ಯಕ್ತಿಯನ್ನು ಕಾಡಿಗೆ ಎಳೆದೊಯ್ದು, ಗಡ್ಡ ಬೋಳಿಸಿ, ವಂದೇ ಮಾತರಂ ಅಂತ ಕೂಗಿಸಿದ್ದಾರೆ. ಈ ವಿಡಿಯೋದ ಅಸಲಿಯತ್ತು ಈಗ ಬಯಲಿಗೆ ಬಂದಿದೆ. ವಿಡಿಯೋದಲ್ಲಿರೋ ಅಬ್ದುಲ್ ಸಮಾದ್ ಎಂಬ ವೃದ್ಧ ಗ್ರಾಮದ ಜನರಿಗೆ ತಾಯತಗಳನ್ನು ಮಾಡಿಕೊಡುತ್ತಿದ್ದ. ಇದೇ ವಿಚಾರವಾಗಿ ಗ್ರಾಮದ ಕೆಲ ಯುವಕರು ಮತ್ತು ಇವರ ನಡುವೆ ಮನಸ್ಥಾಪ ಬಂದಿತ್ತು. ಅದರಂತೆ ವೃದ್ಧನನ್ನು ಅಡ್ಡಗಟ್ಟಿದ್ದ ಯುವಕರು ಈ ಕೃತ್ಯ ಎಸಗಿದ್ದಾರೆ. ಮೂವರು ಆರೋಪಿಗಳನ್ನು ಈಗಾಗಲೇ ಅರೆಸ್ಟ್ ಕೂಡ ಮಾಡಲಾಗಿದೆ. ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದವರಲ್ಲ ಅಂತ ಗಾಜಿಯಾಬಾದ್ ಪೊಲೀಸರು ಮಾಹಿತಿ ನೀಡಿದ್ಧಾರೆ. ಆದ್ರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಆದ ಬಳಿಕ ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ರು. ಹೀಗಾಗಿ ಪೊಲೀಸರು ಕೆಲ ರಾಜಕೀಯ ನಾಯಕರು ಮತ್ತು ಟ್ವಿಟ್ಟರ್ ಸಂಸ್ಥೆಗೆ ವಿಡಿಯೋ ಮತ್ತು ಕೋಮುಗಲಭೆಗೆ ಪ್ರಚೋದನೆ ನೀಡುವ ಕೆಲ ಕಂಟೆಂಟ್​​​ಗಳನ್ನು ತೆಗೆಯುವಂತೆ ಮನವಿ ಮಾಡಿದ್ರು. ಆದ್ರೂ ಟ್ವಿಟ್ಟರ್ ಬಳಕೆದಾರರು ಪೋಸ್ಟ್ ಡಿಲೀಟ್ ಮಾಡಿಲ್ಲ. ಅಲ್ಲದೆ ಟ್ವಿಟ್ಟರ್ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸದ್ಯ ಟ್ವಿಟ್ಟರ್​, ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಟ್ವಿಟ್ಟರ್ ಸಂಸ್ಥೆ ಡಿಜಿಟಲ್ ರೂಲ್ಸ್ ಫಾಲೋ ಮಾಡದ ಕಾರಣ ಅದಕ್ಕಿದ್ದ ಲೀಗಲ್ ಪ್ರೊಟೆಕ್ಷನ್​ನ್ನು ವಾಪಸ್ ಪಡೆಯಲಾಗಿತ್ತು. ಇದ್ರ ಲಾಭ ಪಡೆದುಕೊಂಡ ಉತ್ತರ ಪ್ರದೇಶ ಸರ್ಕಾರ ಟ್ವಿಟ್ಟರ್​ ಮೇಲೆ ದೇಶದಲ್ಲೇ ಮೊದಲ ಬಾರಿಗೆ ಎಫ್​​ಐಆರ್ ದಾಖಲಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಬ್ದುಲ್ ಸಮಾದ್ ಕುಟುಂಬಸ್ಥರು, ಪೊಲೀಸರು ತಾಯತ ಮಾರ್ತಿದ್ರು ಅಂತ ಸುಳ್ಳು ಹೇಳ್ತಿದ್ದಾರೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply