ಬೇಲ್​ ಸಿಕ್ಕರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.. ಪಂಜರದಲ್ಲೇ ರಾ‘ಗಿಣಿ’!

masthmagaa.com:

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪದಲ್ಲಿ ನಟಿ ರಾಗಿಣಿ ದ್ವಿವೇದಿಗೆ ಬೇಲ್ ಸಿಕ್ಕರೂ ಬಿಡುಗೆ ಭಾಗ್ಯ ಮಾತ್ರ ಸಿಗ್ತಿಲ್ಲ. ಸುಪ್ರೀಂಕೋರ್ಟ್​ನಿಂದ ಜಾಮೀನು ಮಂಜೂರಾದ ಬಳಿಕ ಈಗಾಗಲೇ 3 ದಿನ ಜೈಲಿನಲ್ಲಿ ಕಳೆದಿರುವ ರಾಗಿಣಿ ನಾಳೆವರೆಗೂ ಜೈಲಿನಲ್ಲೇ ಇರಲಿದ್ದಾರೆ. ಅವರ ಜಾಮೀನಿಗೆ 3 ಲಕ್ಷ ರೂಪಾಯಿಯ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ನೀಡಬೇಕು ಅನ್ನೋ ಕಂಡೀಷನ್ ಹಾಕಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಅದನ್ನ ಪೂರೈಸಲು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಸೋಮವಾರ ಶ್ಯೂರಿಟಿ ಷರತ್ತು ಪೂರೈಸಿ ತುಪ್ಪದ ಬೆಡಗಿ ಜೈಲಿನಿಂದ ಹೊರಬರೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅಲ್ಲಿವರೆಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ರಾಗಿಣಿ ಇರಬೇಕಿದೆ.

-masthmagaa.com

Contact Us for Advertisement

Leave a Reply