ಉತ್ತರ ಪ್ರದೇಶ: ಹಳ್ಳಿಗೆ ನುಗ್ಗಿದ ಹುಲಿಯ ಪ್ರಜ್ಞೆ ತಪ್ಪಿಸಿ ಬಂಧನ!

masthmagaa.com:

ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಹುಲಿಯೊಂದನ್ನ 12 ಗಂಟೆಗಳ ಕಾರ್ಯಾಚರಣೆ ನಂತರ ಸೆರೆ ಹಿಡಿದಿರೋ ಘಟನೆ ಉತ್ತರ ಪ್ರದೇಶದ ಪೀಲಿಭೀತ್‌ ಜಿಲ್ಲೆಯಲ್ಲಿ ನಡೆದಿದೆ. ಅರಣ್ಯದಿಂದ ತಪಿಸ್ಕೊಂಡು ಈ ಹುಲಿ ಅಲ್ಲಿನ ಅಟ್ಕೋನಾ ಅನ್ನೋ ಹಳ್ಳಿಗೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನುಗ್ಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹುಲಿಗೆ ಟ್ತಾಂಕ್ವಿಲೈಸರ್‌ ಅಥ್ವಾ ಮತ್ತು ಬರುವ ಇಂಜೆಕ್ಶನ್‌ ಶೂಟ್‌ ಮಾಡಿದ್ರು. ಇದಾದ ನಂತರ ಈ ಹುಲಿ ಮಂಪರಿನಲ್ಲಿ ಗೋಡೆಯೊಂದ್ರ ಮೇಲೆ ಆರಾಮಾಗಿ ಕೈಕಾಲುಗಳನ್ನ ಚಾಚ್ಕೊಂಡು ರೆಸ್ಟ್‌ ಮಾಡ್ತಿತ್ತು. ಆ ಟೈಮ್‌ನಲ್ಲಿ ಹಳ್ಳಿಯ ಜನರೆಲ್ಲ ಈ ಹುಲಿಯನ್ನ ನೋಡ್ಬೇಕು ಅಂತ ಹುಲಿಯ ಸುತ್ತಾ ಗುಂಪು ಕಟ್ಕೊಂಡು ನಿಂತಿದ್ರು. ಅಷ್ಟೊತ್ತಿಗಾಗ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ನೆಟ್‌ಗಳನ್ನ ಹಿಡಿದು ಹುಲಿಯನ್ನ ಸುತ್ತುವರೆದ್ರು. ನಂತರ ಪ್ರಜ್ಞೆ ತಪ್ಪಿದ ಹುಲಿಯನ್ನ ಸೆರೆಹಿಡಿಯಲಾಗಿದೆ. ಇನ್ನು ಈ ಹುಲಿ ಗೋಡೆ ಮೇಲೆ ಆರಾಮಾಗಿ ಯಾವ್ದೇ ಚಿಂತೆಯಿಲ್ದೇ ಕೂತಿರೋ ವಿಡಿಯೋ ಮಾತ್ರ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಚೆನ್ನಾಗಿ ವೈರಲ್‌ ಅಗ್ತಿದೆ.

-masthmagaa.com

Contact Us for Advertisement

Leave a Reply