ಸುಶೀಲ್ ಕುಮಾರ್​​ಗೆ ಜೈಲಲ್ಲೇ ಟಿವಿ! ಕೊಲೆ ಆರೋಪಿಗೆ ಎಂಥಾ ಸೌಲಭ್ಯ!!

masthmagaa.com:

ರೆಸ್ಲರ್ ಸಾಗರ್ ರಾಣಾ​ ಧನ್​ಕರ್​ ಅನ್ನೋರನ್ನ ಕೊಲೆ ಮಾಡಿದ ಆರೋಪದಲ್ಲಿ ದೆಹಲಿಯ ತಿಹಾರ್​ ಜೈಲು ಸೇರಿರೋ ರೆಸ್ಲರ್​ ಸುಶಿಲ್ ಕುಮಾರ್​ಗೆ​ ಜೈಲಿನಲ್ಲಿ ಟಿವಿ ನೋಡೋ ಭಾಗ್ಯ ಸಿಕ್ಕಿದೆ. ಅಂದ್ಹಾಗೆ ನಾಳೆಯಿಂದ ಟೋಕಿಯೋ ಒಲಿಂಪಿಕ್ಸ್ ಆರಂಭ ಆಗ್ತಿದೆ. ಈ ಹಿನ್ನೆಲೆ ಜೈಲಿನಿಂದಲೇ ಒಲಿಂಪಿಕ್ಸ್​ ನೋಡಲು ವ್ಯವಸ್ಥೆ ಮಾಡಿಕೊಡಿ ಅಂತ ಮಾಜಿ ಒಲಿಂಪಿಕ್ಸ್​ ಮೆಡಲಿಸ್ಟ್​ ಸುಶಿಲ್ ಕುಮಾರ್​ ಮನವಿ ಮಾಡಿದ್ರು. ಅದರಂತೆ ಈಗ ಅವರಿರುವ ಜೈಲಿನ ಕಾಮನ್​ ಏರಿಯಾದಲ್ಲಿ ಟಿವಿಯನ್ನ ಫಿಕ್ಸ್ ಮಾಡಲು ಜೈಲಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಅಂದ್ಹಾಗೆ ಈ ಸುಶಿಲ್ ಕುಮಾರ್​, ಈ ಹಿಂದೆ ಕೂಡ ವಿಶೇಷ ಆಹಾರದ ವ್ಯವಸ್ಥೆ, ಹೆಲ್ತ್​ ಸಪ್ಲಿಮೆಂಟ್​​ಗಳಾದ ಪ್ರೋಟೀನ್​, ಒಮೆಗಾ ಥ್ರಿ ಮಾತ್ರೆ, ಮಲ್ಟಿವಿಟಮಿನ್​ ಟ್ಯಾಬ್ಲೆಟ್​​, ಎಕ್ಸರ್​ಸೈಸ್​ ಬ್ಯಾಂಡ್ಸ್ ಸೇರಿದಂತೆ ಹಲವು ಬೇಡಿಕೆಗಳನ್ನ ಇಟ್ಟಿದ್ರು. ಇದೆಲ್ಲದ್ದಕ್ಕೂ ದೆಹಲಿ ಕೋರ್ಟ್ ಇಲ್ಲ ಅಂದಿತ್ತು. ಈಗ ಟಿವಿ ಸಿಕ್ಕಿದೆ. ಇನ್ನು ಒಲಿಂಪಿಕ್ಸ್​ನ ಓಪನಿಂಗ್ ಸೆರಮನಿಯಲ್ಲಿ ಭಾರತದ 20 ಅಥ್ಲೀಟ್​​ಗಳು ಮತ್ತು 6 ಮಂದಿ ಅಧಿಕಾರಿಗಳ ತಂಡ ಪಾಲ್ಗೊಳ್ಳಲಿದ್ದಾರೆ.

-masthmagaa.com

Contact Us for Advertisement

Leave a Reply