ಮಸೂದ್ ಅಝರ್​​​​​​​ಗೆ ಸೇರಿದ ಎರಡು ನೆಲೆಗಳು ಪತ್ತೆ! ಎಲ್ಲಿವೆ ಗೊತ್ತಾ?

masthmagaa.com:

ತಾನು ಉಗ್ರರಿಗೆ ಸಪೋರ್ಟ್​ ಕೊಡ್ತಿಲ್ಲ ಅಂತ ಪಾಕಿಸ್ತಾನ ಹೇಳಿಕೊಂಡೇ ಬಂದಿದೆ. ಆದ್ರೆ ಪುಲ್ವಾಮಾ ದಾಳಿ ಮತ್ತು 2001ರ ಸಂಸತ್​ ಮೇಲಿನ ದಾಳಿಯ ರೂವಾರಿ ಮಸೂದ್ ಅಝರ್​​​ಗೆ ಪಾಕ್ ರಕ್ಷಣೆ ನೀಡಿರೋದಕ್ಕೆ ಸ್ಪಷ್ಟವಾದ ಸಾಕ್ಷ್ಯ ಸಿಕ್ಕಿದೆ. ಬಹಾವಲ್​ಪುರದಲ್ಲಿ ಮಸೂದ್​ ಅಝರ್​​ಗೆ ಸೇರಿದ ಎರಡೆರಡು ನೆಲೆಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಫುಲ್ ಪಾಶ್ ಏರಿಯಾದಲ್ಲಿ ಈ ಮನೆಗಳಿದ್ದು, ಪಕ್ಕದಲ್ಲೇ ಮಸೀದಿ ಕೂಡ ಇದೆ. 4 ಕಿಲೋಮೀಟರ್ ದೂರದಲ್ಲಿ ಈ ಮನೆಗಳಿದ್ದು, ಎರಡಕ್ಕೂ ಪಾಕಿಸ್ತಾನ ಸೇನೆಯಿಂದಲೇ ಕಾವಲಿದೆ. ಅದ್ರಲ್ಲಿ ಒಂದಂತೂ ಲಾಹೋರ್ ಹೈಕೋರ್ಟ್​​​​ನಿಂದ ಕೇವಲ ಒಂದೇ ಕಿಲೋಮೀಟರ್ ದೂರದಲ್ಲಿದೆ ಅಂತ ಕೂಡ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಒಸಾಮಾ ರೀತಿಯ ಕಾಯಾಚರಣೆ ನಡೆಯದಂತೆ ತಡೆಯಲು, ನಡೆದ್ರೂ ಸುಲಭವಾಗಿ ತಪ್ಪಿಸಿಕೊಳ್ಳಲು ಈ ಪ್ಲಾನ್ ಮಾಡಲಾಗಿದೆ. ಇನ್ನು ನಿನ್ನೆ ದಕ್ಷಿಣ ಮತ್ತು ಉತ್ತರ ವಜೀರಿಸ್ಥಾನ್​​ನಲ್ಲಿ ಉಗ್ರರು ಯೋಧರ ಮೇಲೆ ದಾಳಿ ನಡೆಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply