ಟೋಬಿ ನ್ಯೂ ಟೀಸರ್‌: ರಾಜ್‌ ಬಿ ಶೆಟ್ಟಿ ಖಡಕ್‌ ಲುಕ್‌ !

masthmagaa.com:

ಟೋಬಿ ಚಿತ್ರದ ಪೋಸ್ಟರ್‌ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟಿತ್ತು. ಈಗ ಚಿತ್ರತಂಡ ಟೀಸರ್‌ ರಿಲೀಸ್‌ ಮಾಡಿ ನಿರೀಕ್ಷೆಯನ್ನ ಹೆಚ್ಚುಮಾಡಿದ್ದಾರೆ. ಹಳೆ ಪೋಸ್ಟರ್‌ನಲ್ಲಿ ಒಂದು ಟಗರಿಗೆ ಮೂಗಿಗೆ ಮೂಗುತಿ ಹಾಕಿದ್ರು, ಆದ್ರೆ ಈಗ ರಿಲೀಸ್‌ ಆಗಿರೋ ಟೀಸರ್‌ನಲ್ಲಿ ಸ್ವತಃ ರಾಜ್‌ ಬಿ ಶೆಟ್ಟಿ ಅವರೇ ಕಾಣಿಸಿಕೊಂಡಿದ್ದಾರೆ. ಅದರಲ್ಲು ರಾಜ್‌ ಬಿ ಶೆಟ್ಟಿ ಅವರ ಮೂಗಿಗೂ ದೊಡ್ಡ ಮೂಗುತಿ ಇದೆ. ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ. ಕತೆ ಏನಿರಬಹುದು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಅಗಸ್ಟ್‌ 25ಕ್ಕೆ ಉತ್ತರ ಸಿಗಲಿದೆ. ಯಾಕಂದ್ರೆ ಅಗಸ್ಟ್‌ 25ಕ್ಕೆ ಈ ಸಿನಿಮಾ ತೆರೆ ಮೇಲೆ ಬರಲಿದೆ.

ಟೀಸರ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಜ್ ಬಿ ಶೆಟ್ಟಿ, ‘ಕುರಿಯ ಕೆಣಕಿದ್ದಕ್ಕೆ ಧನ್ಯವಾದಗಳು. ಕುರಿ ಈಗ ಮಾರಿಯಾಗಿ ನಿಮ್ಮ ಮುಂದೆ, ಟೋಬಿ ಬಂದಿದ್ದಾನೆ…. ಮಾರಿಗೆ ದಾರಿ ಕೆಣಕಿದ ಕುರಿ ಈಗ ಮಾರಿಯಾಗಿದೆ. ಟೋಬಿ ಬಂದಾಗಿದೆ, ಮಾರಿಗೆ ದಾರಿ ಬಿಡಿ” ಅಂತ  ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply