ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟಕ್ಕೆ ಇಬ್ಬರು ಮಹಿಳೆಯರು ಬಲಿ!

masthmagaa.com:

ಅಪಾರ್ಟ್​ಮೆಂಟ್​​ವೊಂದರ ಎರಡನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಹಿಳೆಯರು ಸಜೀವದಹನವಾಗಿರೋ ಘಟನೆ ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ. ಸಿಲಿಂಡರ್ ಸ್ಫೋಟಿಸಿ ಬೆಂಕಿ ಅವಘಡ ಸಂಭವಿಸಿರಬಹುದು ಅಂತ ಶಂಕಿಸಲಾಗಿದೆ. 59 ವರ್ಷದ ಭಾಗ್ಯ ರೇಖಾ ಮತ್ತು 82 ವರ್ಷದ ಲಕ್ಷ್ಮೀದೇವಿ ಮೃತರು ಅಂತ ಗುರುತಿಸಲಾಗಿದೆ. ಇದ್ರಲ್ಲಿ ಒಬ್ಬರಂತೂ ಬೆಂಕಿ ಅವಘಡ ಸಂಭವಿಸಿದ ನಂತ್ರ ಕೆಲಹೊತ್ತು ಒಂದು ಮೂಲೆಯಲ್ಲಿ ನಿಂತು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದ್ರೆ ಸ್ಥಳೀಯರು ಸಹಾಯ ಮಾಡದ ರೀತಿಯಲ್ಲಿ ಬಿಲ್ಡಿಂಗ್​ನ ಸೇಫ್ಟಿ ಗ್ರಿಲ್ ಸಂಪೂರ್ಣವಾಗಿ ಕವರ್ ಆಗಿತ್ತು. ಕೊನೆಗೆ ಮಹಿಳೆ ಬೆಂಕಿಗಾಹುತಿಯಾಗಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ಒಂದು ಫ್ಲಾಟ್​​ ಸುಟ್ಟು ಹೋಗಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಭಾರಿ ಹರಸಾಹ ಪಟ್ರು. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

-masthmagaa.com

Contact Us for Advertisement

Leave a Reply