ಇವತ್ತು ಎಸ್​​ಎಸ್​ಎಲ್​ಸಿ ರಿಸಲ್ಟ್​​…ಎಲ್ಲಿ ರಿಸಲ್ಟ್​ ನೋಡಬೇಕು..?

masthmagaa.com:

2020-21ನೇ ಶೈಕ್ಷಣಿಕ ವರ್ಷದ ಎಸ್​ಎಸ್​​ಎಲ್​ಸಿ ಪರೀಕ್ಷೆ ಫಲಿತಾಂಶ ಇವತ್ತು ಪ್ರಕಟವಾಗಿದೆ. ಈ ಸಲ 99.9 ಪರ್ಸೆಂಟ್​ ಫಲಿತಾಂಶ ಬಂದಿದೆ. ಒಬ್ಬ ವಿದ್ಯಾರ್ಥಿ ತನ್ನ ಬದಲಿಗೆ ಬೇರೆಯವರನ್ನ ಕಳಿಸಿ ಪರೀಕ್ಷೆ ಬರೆಸಿದ್ದರಿಂದ ಫೇಲ್​​ ಮಾಡಲಾಗಿದೆ. ಉಳಿದವರೆಲ್ಲರೂ ಪಾಸ್​​ ಆಗಿದ್ದಾರೆ. 157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ ಗಳಿಸಿದ್ದಾರೆ. 1.28 ಲಕ್ಷ ವಿದ್ಯಾರ್ಥಿಗಳು A+ ಗ್ರೇಡ್ ಪಡೆದ್ರೆ, 2.50 ಲಕ್ಷ ವಿದ್ಯಾರ್ಥಿಗಳು A ಗ್ರೇಡ್, 2.87 ಲಕ್ಷ ವಿದ್ಯಾರ್ಥಿಗಳು B ಗ್ರೇಡ್​ ಮತ್ತು 1.13 ಲಕ್ಷ ವಿದ್ಯಾರ್ಥಿಗಳು C ಗ್ರೇಡ್​ ಪಡೆದಿದ್ದಾರೆ. ಇನ್ನು ರಿಸಲ್ಟ್ ನೋಡಲು ಕೊಟ್ಟಿದ್ದ http://sslc.karnataka.gov.in/ ಅನ್ನೋ ವೆಬ್​ಸೈಟ್​ ತಾಂತ್ರಿಕ ದೋಷದಿಂದ ಓಪನ್ ಆಗ್ತಿರಲಿಲ್ಲ. ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳು ರಿಸಲ್ಟ್ ನೋಡಲಾಗದೆ ಕಂಗಾಲಾಗಿದ್ರು. ಇದೀಗ ಎಸ್​​ಎಸ್​ಎಲ್​ಸಿ ರಿಸಲ್ಟ್​ಗೆ ಹೊಸ ವೆಬ್​​ಸೈಟ್​ ಲಿಂಕ್​ ಬಿಡಲಾಗಿದೆ. ಅದು ಈ ರೀತಿ ಇದೆ. https://karresults.nic.in/first_sslc_kar21.asp ಈ ಲಿಂಕ್​ಗೆ ಹೋಗಿ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಅನ್ನ ನೋಡಬಹುದು.

-masthmagaa.com

Contact Us for Advertisement

Leave a Reply