ಒಲಿಂಪಿಕ್ಸ್‌ : ಮಹಿಳಾ ಹಾಕಿ ತಂಡದಿಂದಲೂ ಇತಿಹಾಸ ಸೃಷ್ಟಿ!

masthmagaa.com:

ಟೋಕ್ಯೋದಲ್ಲಿ ನಡೆಯುತ್ತಿರುವ 32 ನೇ ಒಲಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರ ಹಾಕಿ ತಂಡ ಆಸ್ಟ್ರೇಲಿಯಾ ತಂಡವನ್ನ ಕ್ವಾರ್ಟರ್‌ ಫೈನಲ್‌ನಲ್ಲಿ 1-0 ಅಂತರದಲ್ಲಿ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರ ಹಾಕಿ ತಂಡ ಸೆಮಿ ಫೈನಲ್‌ ತಲುಪಿದೆ. ಭಾರತ ಮಹಿಳಾ ತಂಡದ ಆಟಗಾರ್ತಿ ಗುರ್ಜಿತ್‌ ಕೌರ್‌ 22 ನೇ ನಿಮಿಷದಲ್ಲಿ ಭಾರಿಸಿದ ಗೋಲ್‌ ನಿಂದ ಆಸ್ಟ್ರೇಲಿಯ ತಂಡವನ್ನ  ಸದೆಬಡಿದು ಭಾರತ ಸೆಮಿಫೈನಲ್‌ ತಲುಪಿದೆ.

-masthmagaa.com

Contact Us for Advertisement

Leave a Reply