ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ ಮತ್ತೊಂದು ಪದಕ..ಇವತ್ತಿನ ಅಪ್​ಡೇಟ್ಸ್​ ಇಲ್ಲಿದೆ

masthmagaa.com:

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇವತ್ತು ಮತ್ತೊಂದು ಕಂಚಿನ ಪದಕ ಸಿಕ್ಕಿದೆ. 64ರಿಂದ 69 ಕೆಜಿ ತೂಕದ ಮಹಿಳೆಯರ ವೆಲ್ಟರ್​ವೇಟ್​​ ಸೆಮಿ ಫೈನಲ್​​ನಲ್ಲಿ ಟರ್ಕಿ ವಿರುದ್ಧ 0-5ರಿಂದ ಸೋತ ಭಾರತದ ಲೊವ್​ಲಿನಾ ಬೋರ್ಗಹೈನ್​ ಕಂಚಿನ ಪದಕ ಗೆದ್ದಿದ್ದಾರೆ. ಇವರು ಅಸ್ಸಾಂ ಮೂಲದವರು. ಈ ಮೂಲಕ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. 1 ಬೆಳ್ಳಿ, ಎರಡು ಕಂಚು. ಇನ್ನೊಂದು ಗುಡ್​​ ನ್ಯೂಸ್​ ಅಂದ್ರೆ 57 ಕೆಜಿ ವಿಭಾಗದ ಪುರುಷರ ಫ್ರೀಸ್ಟೈಲ್​ ರೆಸ್ಲಿಂಗ್​ನಲ್ಲಿ ಭಾರತದ ರವಿ ಕುಮಾರ್ ದಹಿಯಾ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಪಕ್ಕಾ ಆಗಿದೆ. ದಹಿಯಾ ಬಂಗಾರನೇ ಗೆದ್ದು ಬರಲಿ, ಭಾರತಕ್ಕೆ ಮೊದಲ ಚಿನ್ನ ಸಿಗಲಿ ಅಂತ ಹಾರೈಸೋಣ. ಅಂದ್ಹಾಗೆ ನಾಳೆ ಫೈನಲ್​ ಮ್ಯಾಚ್ ನಡೆಯಲಿದ್ದ ರಷ್ಯನ್​ ಒಲಿಂಪಿಕ್​ ಕಮಿಟಿಯ ಆಟಗಾರನನ್ನ ಎದುರಿಸಲಿದ್ದಾರೆ ರವಿ ಕುಮಾರ್​ ದಹಿಯಾ. ಕಂಚಿನ ಪದಕಕ್ಕಾಗಿ ದೀಪಕ್ ಪೂನಿಯಾ ಕೂಡ ನಾಳೆ ಸೆಣಸಾಟ ನಡೆಸಲಿದ್ದಾರೆ. ಇನ್ನು ಇವತ್ತು ನಡೆದ ಮಹಿಳೆಯರ ಹಾಕಿ ಸೆಮಿ ಫೈನಲ್​​ನಲ್ಲಿ ಅರ್ಜೆಂಟೀನಾ ವಿರುದ್ಧ ಭಾರತದ ಹಾಕಿ ತಂಡ 2-1 ಗೋಲುಗಳಿಂದ ಸೋತಿದೆ. ಇದೀಗ ಈ ತಂಡ ಕಂಚಿನ ಪದಕಕ್ಕಾಗಿ ಗ್ರೇಟ್​ ಬ್ರಿಟನ್​ ಜೊತೆ ಶುಕ್ರವಾರ ಸೆಣಸಾಟ ನಡೆಸಲಿದೆ. ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಾಳೆ ಜರ್ಮನಿ ವಿರುದ್ಧ ಫೈಟ್ ಮಾಡಲಿದೆ. ನಾಳೆ ಬೆಳಗ್ಗೆ 7 ಗಂಟೆ ಮ್ಯಾಚ್ ಆರಂಭವಾಗಲಿದೆ.

-masthmagaa.com

Contact Us for Advertisement

Leave a Reply