ಪನ್ನುನ್‌ ವಿಚಾರದ ಮಾತುಕತೆಗೆ ಭಾರತಕ್ಕೆ ಬಂದ US ಅಧಿಕಾರಿ!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಟಾಪ್‌ ಭದ್ರತಾ ಸಲಹೆಗಾರ ಜಾನ್‌ ಫೈನರ್‌ ಸೋಮವಾರ ಭಾರತಕ್ಕೆ ಬಂದಿದ್ದಾರೆ. ಭಾರತದ ವಿರುದ್ಧ ಆರೋಪಿಸಲಾಗಿರೊ ಖಲಿಸ್ತಾನಿ ಉಗ್ರ ಗುರುಪಥ್‌ವಂತ್‌ ಸಿಂಗ್‌ ಪನ್ನುನ್‌ ಹತ್ಯೆ ಯತ್ನದ ವಿಚಾರವಾಗಿ ಹಾಗೂ ಭಾರತ-ಅಮೆರಿಕ ಸಹಯೋಗದ iCET, ಅಂದ್ರೆ ಕ್ರಿಟಿಕಲ್‌ ಮತ್ತು ಎಮರ್ಜೆನ್ಸಿ ಟೆಕ್ನಾಲಜಿಯ ಉಪಕ್ರಮದ ಪ್ರಗತಿಯನ್ನ ಪರಿಶೀಲನೆ ಮಾಡಲು ಫೈನರ್‌ ಭಾರತಕ್ಕೆ ತೆರಳಿದ್ದಾರೆ ಅಂತ ವೈಟ್‌ ಹೌಸ್‌ ಹೇಳಿಕೆ ನೀಡಿದೆ. ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ್‌ ಮಿಶ್ರಿ ಅವ್ರ ಜೊತೆ ಫೈನರ್‌ ಮಾತುಕತೆ ನಡೆಸಲಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply