ಜೋರ್ಡಾನ್‌ನ ಬಂದರಿನಲ್ಲಿ ವಿಷಕಾರಿ ಅನಿಲ ಸೋರಿಕೆ: 12 ಜನ ಸಾವು..200 ಜನ ಅಸ್ವಸ್ತ

masthmagaa.com:

ಜೋರ್ಡಾನ್‌ನ ಅಕಾಬಾ ಬಂದರಿನ ಹಡಗೊಂದರಿಂದ ವಿಷಕಾರಿ ಅನಿಲ ಹೊರ ಸೂಸಿದ ಪರಿಣಾಮ12 ಜನ ಮೃತಪಟ್ಟಿದ್ದು, 200ಕ್ಕೂ ಅಧಿಕ ಜನರು ಅಸ್ವಸ್ತರಾಗಿದ್ದಾರೆ. ಕ್ರೇನೊಂದು ಕ್ಲೋರಿನ್‌ ತುಂಬಿದ ಟ್ಯಾಂಕ್‌ಗಳನ್ನ ಹಡಗಿನಲ್ಲಿ ಇಡ್ತಾ ಇತ್ತು. ಈ ಸಂದರ್ಭದಲ್ಲಿ ಕ್ರೇನ್‌ನ ಕಬ್ಬಿಣದ ವೈರ್‌ ಕಟ್‌ ಆಗಿಯೋ, ಅಥವಾ ಏನೋ ಸಮಸ್ಯೆಯಾಗಿ ಸ್ಪೋಟ ಸಂಭವಿಸಿ, ವಿಷಯುಕ್ತವಾದ ಹಳದಿ ಅನಿಲ ಹೊರಬಂದಿದೆ. ಈ ಅನಿಲವನ್ನ ಮನುಷ್ಯ ಉಸಿರಾಡಿದ್ರೆ ಅಥವಾ ಅದರ ಗಾಳಿ ಮನುಷ್ಯನ ದೇಹಕ್ಕೆ ತಾಗಿದ್ರೆ ಚರ್ಮಕ್ಕೆ ಸಮಸ್ಯೆಯನ್ನ ಉಂಟು ಮಾಡುತ್ತೆ. ಇದೀಗ ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಜೋರ್ಡಾನ್‌ನ ಪ್ರಧಾನಿ ಬಿಷರ್ ಅಲ್-ಖಾಸಾವ್ನೆಆದೇಶಿಸಿದ್ದಾರೆ.

-masthmagaa.com

Contact Us for Advertisement

Leave a Reply