masthmagaa.com:

ದೇಶದಲ್ಲಿ ಶೀಘ್ರದಲ್ಲೇ ಕೊರೋನಾ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗುವ ಲಕ್ಷಣ ಕಾಣ್ತಿದೆ. ಯಾಕಂದ್ರೆ ಇಂದು ಅಥವಾ ನಾಳೆ ವೇಳೆಗೆ ಕೊರೋನಾ ಲಸಿಕೆಯ ಪೂರೈಕೆ ಆರಂಭವಾಗಲಿದೆ ಅಂತ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈ ಲಸಿಕೆಗಳನ್ನ ದೇಶದ ವಿವಿಧ ನಗರಗಳಿಗೆ ನಾಗರಿಕ ಮತ್ತು ಸೇನಾ ವಿಮಾನಗಳ ಮೂಲಕ ಕಳಿಸಲಾಗುತ್ತೆ. ಮಹಾರಾಷ್ಟ್ರದಲ್ಲಿರುವ ಪುಣೆ ಲಸಿಕೆ ಪೂರೈಕೆಯ ಸೆಂಟ್ರಲ್ ಹಬ್ ಆಗಿರುತ್ತೆ. ಇಲ್ಲಿಂದಲೇ ಉಳಿದ ರಾಜ್ಯಗಳಿಗೆ ಲಸಿಕೆ ಸಪ್ಲೈ ಆಗುತ್ತೆ. ದೇಶದಲ್ಲಿ ಲಸಿಕೆ ಸಪ್ಲೈ ಮಾಡಬೇಕಾದ 41 ಜಾಗಗಳನ್ನ ಗುರುತಿಸಲಾಗಿದೆ. ಉತ್ತರ ಭಾರತಕ್ಕೆ ದೆಹಲಿ ಮತ್ತು ಹರಿಯಾಣದ ಕರ್ನಲ್​ ಮಿನಿ ಹಬ್​ಗಳಂತೆ ಕೆಲಸ ಮಾಡಲಿವೆ. ಪೂರ್ವ ಮತ್ತು ಈಶಾನ್ಯ ಭಾರತಕ್ಕೆ ಕೋಲ್ಕತ್ತಾ ಮಿನಿ ಹಬ್ ಆಗಿರಲಿದೆ. ದಕ್ಷಿಣ ಭಾರತಕ್ಕೆ ಚೆನ್ನೈ ಮತ್ತು ಹೈದ್ರಾಬಾದ್​ ಮಿನಿ ಹಬ್ ಆಗಿರಲಿದೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply