masthmagaa.com:

ಕೊರೋನಾ ಸೋಂಕನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಡೊನಾಲ್ಡ್​ ಟ್ರಂಪ್ ಸೋಲಿಗೆ ಕಾರಣ. ಆದ್ರೆ ಭಾರತದಲ್ಲಿ ಪ್ರಧಾನಿ ಮೋದಿ ಲಾಕ್​ಡೌನ್ ಹೇರುವ ದೃಢ ನಿರ್ಧಾರ ಮಾಡಿದ್ರು ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಅಲ್ಲದೆ ಆರೋಗ್ಯ ಮತ್ತು ಆರ್ಥಿಕ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ಅಮೆರಿಕಕ್ಕೆ ಇನ್ನೂ ಸ್ಪಷ್ಟತೆ ಇಲ್ಲ. ಆದ್ರೆ ನಾವು ‘ಜಾನ್ ಹೈ ತೋ ಜಹಾನ್ ಹೈ’ (ಜೀವ ಇದ್ದರೆ ಜಗತ್ತು) ಎಂಬ ಫಿಲಾಸಫಿಯೊಂದಿಗೆ ಮುಂದೆ ಹೆಜ್ಜೆ ಇಟ್ಟಿದ್ದೇವೆ ಅಂತ ನಡ್ಡಾ ಹೇಳಿದ್ದಾರೆ. ಉತ್ತರಾಖಂಡ್​ನಲ್ಲಿ ಬಿಜೆಪಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡುವಾಗ ಈ ರೀತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply