ಕಿಮ್‌ ಜಾಂಗ್‌ ಉನ್‌ ಜೊತೆ ಇನ್ನು ಸಂಪರ್ಕದಲ್ಲಿದ್ದಾರೆ ಟ್ರಂಪ್!

masthmagaa.com:

ಟ್ರಂಪ್‌ ಅಮೆರಿಕದ ಅಧ್ಯಕ್ಷ ಆಗಿದ್ದಾಗ ಹಲವಾರು ಬಾರಿ ದಾಖಲೆಗಳನ್ನ ಹರಿದು ಹಾಕ್ತಿದ್ರು, ಟಾಯ್ಲೆಟ್‌ನಲ್ಲಿ ಹಾಕಿ ಫ್ಲಶ್‌ ಮಾಡ್ತಿದ್ರು, ಕೆಲವೊಂದು ಸಲ ಫ್ಲೋರಿಡಾಗೆ ತಗೊಂಡು ಹೋಗ್ತಿದ್ರು ಎಂಬ ವಿಷಯಗಳು ಈಗ ಬೆಳಕಿಗೆ ಬಂದಿವೆ. ಟ್ರಂಪ್‌ ಈ ರೀತಿ ಅಮೆರಿಕ ಅಧ್ಯಕ್ಷ ಸ್ಥಾನದ ಶಿಷ್ಟಾಚಾರ, ನಿಯಮಗಳನ್ನ ಮುರಿಯೋದು ರಿಪಬ್ಲಿಕನ್‌ ಬೆಂಬಲಿಗರಿಗೆ ಹೆಚ್ಚು ಇಷ್ಟ ಆಗ್ತಿತ್ತು. ಆದ್ರೆ ಈಗ ಅಧ್ಯಕ್ಷೀಯ ದಾಖಲೆಗಳನ್ನ ಸಂರಕ್ಷಿಸೋ ಜವಾಬ್ದಾರಿ ಹೊತ್ತಿರುವ ನ್ಯಾಷನಲ್‌ ಆರ್ಕೈವ್ಸ್‌ ಟ್ರಂಪ್‌ರನ್ನ ತನಿಖೆ ಮಾಡ್ಬೇಕು ಅಂತ ಕೇಳ್ಕೊಂಡಿದೆ. ಟ್ರಂಪ್‌ ಈ ಸಂಬಂಧ ಪ್ರತಿಕ್ರಿಯಿಸಿ ತಾನೇನು ತಪ್ಪು ಮಾಡಿಲ್ಲ. ನ್ಯಾಷನಲ್‌ ಆರ್ಕೈವ್ಸ್‌ ಜೊತೆ ತನ್ನ ಸಂಬಂಧ ಚೆನ್ನಾಗಿಯೇ ಇದೆ ಎಂದಿದ್ದಾರೆ. ಇನ್ನು ಟ್ರಂಪ್‌ಗೆ ದೀರ್ಘಕಾಲ ಸಂಹವನ ಅಧಿಕಾರಿಯಾಗಿದ್ದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಕರ್ತ ಮ್ಯಾಗೀ ಹೇಬರ್‌ಮನ್‌, ಟ್ರಂಪ್‌ ಬಗ್ಗೆ ಬರೆದಿರುವ ಪುಸ್ತಕವೊಂದರಲ್ಲಿ ಟ್ರಂಪ್‌ ಇನ್ನೂ ಕಿಮ್‌ ಜಾಂಗ್‌ ಉನ್‌ ಜೊತೆ ಸಂಪರ್ಕವಿಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಟ್ರಂಪ್‌ ಶ್ವೇತಭವನದ ಟಾಯ್ಲೆಟ್‌ನಲ್ಲಿ ದಾಖಲೆಗಳನ್ನ ಹರಿದು ಹಾಕುತ್ತಿದ್ರಿಂದ ಆಗಾಗ ಪೈಪ್‌ ಜಾಮ್‌ ಆಗುತ್ತಿತ್ತು ಅಂತಾನೂ ತಿಳಿಸಿದ್ದಾರೆ. ಆದ್ರೆ ಟ್ರಂಪ್‌ ಮಾತ್ರ ಇದು ಸುಳ್ಳು ಎಂದಿದ್ದಾರೆ.

-masthmagaa.com

Contact Us for Advertisement

Leave a Reply