ಉಲ್ಟಾಪಲ್ಟಾ ಪ್ಯಾಂಟ್ ಧರಿಸಿ ಬಂದ ಡೊನಾಲ್ಟ್​ ಟ್ರಂಪ್!

masthmagaa.com:

ಡೊನಾಲ್ಡ್​ ಟ್ರಂಪ್ ವೈಟ್​ ಹೌಸ್​​ನಿಂದ ಬಳಿಕ ಫುಲ್ ಸೈಲೆಂಟ್ ಆಗಿದ್ರು. ಇದೀಗ ಇದೇ ಮೊದಲ ಬಾರಿಗೆ ನಾರ್ಥ್ ಕೆರೋಲಿನಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಇದ್ರಲ್ಲಿ 2024ರಲ್ಲಿ ಮತ್ತೆ ಕೆರೋಲಿನಾದಲ್ಲಿ ರಿಪಬ್ಲಿಕನ್ ಪಕ್ಷವೇ ಗೆಲ್ಲುತ್ತೆ ಅಂತ ವಿಶ್ವಾಸವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ 1250 ಟಿಕೆಟ್​​ಗಳು ಸೋಲ್ಡ್ ಔಟ್​ ಆಗಿವೆ ಅಂತ ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ. ಅಂದಹಾಗೆ ನಾರ್ಥ್ ಕೆರೋಲಿನಾ ಒಂದು ರೀತಿ ರಿಪಬ್ಲಿಕನ್ ಕೋಟೆ ಇದ್ದಂಗೆ.. ಇಲ್ಲಿ ಕಳೆದ 13 ಚುನಾವಣೆಗಳಲ್ಲಿ 11ರಲ್ಲಿ ರಿಪಬ್ಲಿಕನ್ ಪಕ್ಷವೇ ಗೆದ್ದುಕೊಂಡಿದೆ. ಇನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಮೊದಲ ಕಾರ್ಯಕ್ರಮದಲ್ಲೇ ಟ್ರಂಪ್ ಫುಲ್ ಟ್ರೋಲ್ ಆಗಿದ್ದಾರೆ. ಅದಕ್ಕೆ ಕಾರಣ ಅವರ ಪ್ಯಾಂಟ್.. ಅವರು ಧರಿಸಿದ್ದ ಪ್ಯಾಂಟ್​ನಲ್ಲಿ ಜಿಪ್ ಕಾಣಿಸ್ತಿಲ್ಲ. ಹೀಗಾಗಿ ಡೊನಾಲ್ಡ್​ ಟ್ರಂಪ್ ಉಲ್ಟಾ ಪಲ್ಟಾ ಪ್ಯಾಂಟ್ ಹಾಕಿದ್ದಾರೆ. ಜಿಪ್ ಇರೋ ಭಾಗ ಹಿಂದೆ ಇದೆ.. ಹಿಂದಿನ ಸೈಡ್ ಮುಂದೆ ಇದೆ ಅಂತ ಸೋಷಿಯಲ್ ಮೀಡಿಯಾ ಮಂದಿ ಟ್ರೋಲ್ ಮಾಡ್ತಿದ್ದಾರೆ. ಪ್ಯಾಂಟ್ ಮುದ್ದೆ ಮುದ್ದೆಯಾಗಿರೋದು ಕೂಡ ವಿಡಿಯೋದಲ್ಲಿ ನೋಡ್ಬೋದು..‌

-masthmagaa.com

 

Contact Us for Advertisement

Leave a Reply