masthmagaa.com:
ಈ ಟ್ರಂಪ್ ಅಧಿಕಾರದಿಂದ ಕೆಳಗಿಳಿದ್ರೂ ಕೂಡ ಕೀಟ್ಲೆ ಮಾಡೋದು ಬಿಡ್ತಾನೇ ಇಲ್ಲ.. ಆಗಾಗ್ಗೆ ಹೊಸತು ಏನಾದ್ರೂ ಮಾಡಿ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ಟ್ವಿಟ್ಟರ್ ಟ್ರಂಪ್ ಬೆಂಬಲಿಗರ ಹಲವು ಖಾತೆಗಳನ್ನು ಸಸ್ಪೆಂಡ್ ಮಾಡಿದೆ.. ಇತ್ತೀಚೆಗಷ್ಠೇ ಅವರು ತಮ್ಮ ವೆಬ್ಸೈಟ್ನಲ್ಲಿ ಫ್ರಮ್ ದ ಡೆಸ್ಕ್ ಆಫ್ ಡೊನಾಲ್ಡ್ ಜೆ. ಟ್ರಂಪ್ ಅನ್ನೋ ಸೆಕ್ಷನ್ ಓಪನ್ ಮಾಡಿ, ಅದ್ರಲ್ಲಿ ತಮ್ಮ ಅನಿಸಿಕೆ ಬರೆಯೋಕೆ ಶುರು ಮಾಡಿದ್ರು. ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿರೋ ಬೆಂಬಲಿಗರು ಇದನ್ನು ಭಾರಿ ಸಂಖ್ಯೆಯಲ್ಲಿ ಶೇರ್ ಮಾಡೋಕೆ ಶುರು ಮಾಡಿದ್ರು. ಇದೀಗ ಈ ವಾರವೊಂದ್ರಲ್ಲಿ ಟ್ವಿಟ್ಟರ್ ಟ್ರಂಪ್ ಅವರ ಸಂದೇಶ ಶೇರ್ ಮಾಡ್ತಿದ್ದ ಹಲವು ಖಾತೆಗಳನ್ನು ಟ್ವಿಟ್ಟರ್ ಸಸ್ಪೆಂಡ್ ಮಾಡಿದ್ದು, ಇದು ನಮ್ಮ ರೂಲ್ಸ್ಗೆ ವಿರುದ್ಧ ಅಂತ ಹೇಳಿದೆ.
-masthmagaa.com
Contact Us for Advertisement