ಕ್ಷಯ ರೋಗ ಹರಡುವಿಕೆ ಟ್ರ್ಯಾಕ್‌ ಮಾಡಲು ಮ್ಯಾಥಮೆಟಿಕಲ್‌ ಸಿಸ್ಟಮ್‌ ಡೆವಲಪ್‌ ಮಾಡಿದ ಭಾರತ!

masthmagaa.com:

ಕ್ಷಯ ರೋಗ ಹರಡುವಿಕೆಯನ್ನ ಟ್ರ್ಯಾಕ್‌ ಮಾಡಲು ಭಾರತ ಮ್ಯಾಥಮೆಟಿಕಲ್‌ ಮಾದರಿಯೊಂದನ್ನ ಅಭಿವೃದ್ಧಿಪಡಿಸಿದೆ. ಈ ರೀತಿ ಕೇಸ್‌ಗಳನ್ನ ಪತ್ತೆಹಚ್ಚಲು ಸಿಸ್ಟಮ್‌ ಒಂದನ್ನ ಅಭಿವೃದ್ಧಿ ಪಡಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಕ್ಷಯ ರೋಗದ ನ್ಯಾಚುರಲ್‌ ಹಿಸ್ಟರಿ, ಕೇಸ್‌ಗಳು ಹಾಗೂ ಟ್ರೀಟ್‌ಮೆಂಟ್‌ ಕವರೇಜ್‌ಗಳನ್ನ ಬಳಸಿಕೊಂಡು ರೋಗದ ಹರಡುವಿಕೆಯನ್ನ ಟ್ರಾಕ್‌ ಮಾಡಲಾಗುತ್ತೆ ಅಂತ ತಿಳಿದು ಬಂದಿದೆ. ಈ ಹಿಂದೆ ಟಿಬಿ ಖಾಯಿಲೆಗೆ ಸಂಬಂಧಿಸಿದೆ ರಿಪೋರ್ಟ್‌ಗಳನ್ನ WHO ರಿಲೀಸ್‌ ಮಾಡ್ತಿತ್ತು. ಆದ್ರೆ ಇದೀಗ ಭಾರತ ಸ್ವಯಂ ಟ್ರ್ಯಾಕಿಂಗ್‌ ಸಿಸ್ಟಮ್‌ನ್ನ ಅಭಿವೃದ್ಧಿಪಡಿಸಿದೆ.

-masthmagaa.com

Contact Us for Advertisement

Leave a Reply