ಚಿನ್ನ ದರೋಡೆ ಕೇಸ್:‌ ಇಬ್ಬರು ಇಂಡಿಯನ್ಸ್‌ ಸೇರಿ ಒಟ್ಟು 6‌ ಜನ ಅರೆಸ್ಟ್!

masthmagaa.com:

ಭಾರಿ ಪ್ರಮಾಣದ ಚಿನ್ನದ ದರೋಡೆ ಪ್ರಕರಣವೊಂದರಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಒಟ್ಟು ಆರು ಜನ ಅರೆಸ್ಟ್‌ ಆಗಿರೊ ಘಟನೆ ಕೆನಡಾದಲ್ಲಿ ನಡೆದಿದೆ. ಕಳೆದ ವರ್ಷ ಏಪ್ರಿಲ್‌ 17 ರಂದು ಕೆನಡಾದ ಟೊರೆಂಟೊನ ಪಿಯರ್ಸನ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಬಳಿ ಕಾರ್ಗೋ ಕಂಟೇನರ್‌ಲ್ಲಿದ್ದ 22.5 ಮಿಲಿಯನ್‌ ಅಂದ್ರೆ 186.75 ಕೋಟಿ ಮೌಲ್ಯದ ಚಿನ್ನ ಸೇರಿದಂತೆ ವಿದೇಶಿ ನಗದನ್ನ ಕಳ್ಳತನ ಮಾಡಲಾಗಿತ್ತು. ಇದೀಗ ಈ ಕೇಸ್‌ಗೆ ಸಂಬಂಧಿಸಿದಂತೆ ಇಬ್ಬರು ಭಾರತೀಯರು, ಇಬ್ಬರು ಕೆನಡಾ ವಾಯುಸೇನೆಯ ಮಾಜಿ ಸಿಬ್ಬಂದಿಗಳು ಸೇರಿದಂತೆ ಒಟ್ಟು ಆರು ಜನರನ್ನ ಕೆನಡಾ ಪೋಲಿಸರು ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply