ಸಿರಿಯಾದ ವಾಯುನೆಲೆ ಮೇಲೆ ಇಸ್ರೇಲ್ ಏರ್​ಸ್ಟ್ರೈಕ್!

masthmagaa.com:

ಸೆಂಟ್ರಲ್ ಸಿರಿಯಾದ ವಾಯುನೆಲೆ ಮೇಲೆ ಇಸ್ರೇಲ್ ಏರ್​ಸ್ಟ್ರೈಕ್ ನಡೆಸಿದೆ. ಇದ್ರಲ್ಲಿ ಸಿರಿಯಾದ 6 ಮಂದಿ ಯೋಧರು ಗಾಯಗೊಂಡಿದ್ದಾರೆ. ಈ ವೇಳೆ ವಾಯುನೆಲೆಯ ವಸ್ತುಗಳಿಗೂ ಹಾನಿಯಾಗಿದೆ ಅಂತ ಕೂಡ ಮಾಹಿತಿ ಸಿಕ್ಕಿದೆ. ಅಂದಹಾಗೆ ಸಿರಿಯಾದ ಮೇಲೆ ಇಸ್ರೇಲ್ ಸ್ಟ್ರೈಕ್ ನಡೆಸೋದು ಇದೇನು ಹೊಸತಲ್ಲ. 2011ರಲ್ಲಿ ಸಿರಿಯಾದಲ್ಲಿ ನಾಗರಿಕ ಯುದ್ಧ ಶುರುವಾದ ಬಳಿಕ ಇಸ್ರೇಲ್ ಆಗಾಗ ಸ್ಟ್ರೈಕ್ ನಡೆಸ್ತಾ ಇರುತ್ತೆ. ಮತ್ತೊಂದ್ಕಡೆ ಸೌದಿ ಅರೇಬಿಯಾದ ಜಾಜಾನ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದಾರೆ. ಇದ್ರಲ್ಲಿ 10 ಮಂದಿ ಗಾಯಗೊಂಡಿದ್ದು, ವಾರದಲ್ಲಿ ನಡೆದ 2ನೇ ದಾಳಿ ಇದಾಗಿದೆ.

-masthmagaa.com

Contact Us for Advertisement

Leave a Reply